ಮಡಿಕೇರಿ, ಜ. 5: ನೆಹರು ಯುವ ಕೇಂದ್ರ ಮಡಿಕೇರಿ ಹಾಗೂ ಕ್ರೀಡಾ ಸಚಿವಾಲಯ ರಾಜಸ್ಥಾನ ರಾಜ್ಯ ಸರ್ಕಾರ ಆಶ್ರಯದಲ್ಲಿ ಜೈಪುರದಲ್ಲಿ ತಾ. 12 ರಿಂದ 16 ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವ ಉತ್ಸವಕ್ಕೆ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳು ಸೇರಿದಂತೆ ಆಯ್ದ ಇಬ್ಬರು ತೆರಳಲಿದ್ದು, ಕೊಡಗು ಜಿಲ್ಲೆಯಿಂದ ನೆಹರು ಯುವ ಕೇಂದ್ರದ ರಾಷ್ಟ್ರೀಯ ಸೇವಾ ಕಾರ್ಯಕರ್ತರಾದ ಕಡಗದಾಳುವಿನ ವಿವೇಕ್ ಎಂ.ಬಿ. ಮತ್ತು ನೇತಾಜಿ ಯುವಕ ಮಂಡಳ ತಾಳÀತ್ತಮನೆಯ ಗಣೇಶ್ ಕೆ.ಕೆ. ಆಯ್ಕೆಯಾಗಿದ್ದಾರೆ.