ಗೋಣಿಕೊಪ್ಪ ವರದಿ, ಜ. 6 : ಹಾಕಿ ಇಂಡಿಯಾ ಸಹಯೋಗದಲ್ಲಿ ಅಸ್ಸಾಂ ಹಜೋಯಿ ಮೈದಾನದಲ್ಲಿ ನಡೆಯುತ್ತಿರುವ ನ್ಯಾಷನಲ್ ಸಬ್ ಜೂನಿಯರ್ ಬಾಲಕರ ಹಾಕಿ ಟೂರ್ನಿಯಲ್ಲಿ 2 ನೇ ಪಂದ್ಯವಾಡಿದ ಹಾಕಿ ಕೂರ್ಗ್ ತಂಡವು ಮಧ್ಯ ಭಾರತ್ ಹಾಕಿ ತಂಡದ ವಿರುದ್ದ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದೆ. ಹಾಕಿಕೂರ್ಗ್ ತಂಡವು 0-1 ಗೋಲುಗಳ ಮೂಲಕ ಸೋಲನುಭವಿಸಿತು. 3 ನೇ ಪಂದ್ಯವನ್ನು ವಿದರ್ಭ ಹಾಕಿ ತಂಡದ ವಿರುದ್ದ ತಾ. 8 ರಂದು ಆಡಲಿದೆ.