ಶ್ರೀಮಂಗಲ, ಜ. 4: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ನವೆಂಬರ್ ಒಂದರಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ 65ನೇ ದಿನದ ಸತ್ಯಾಗ್ರಹದಲ್ಲಿ ಬಿರುನಾಣಿಯ ಮರೆನಾಡು ಮಾಜಿ ಸೈನಿಕರ ಸಂಘ, ಚೆಕ್ಕೇರ ಕುಟುಂಬಸ್ಥರು, ಕುಂದ-ಈಚೂರು ಗ್ರಾಮದ ಶ್ರೀ ಮಾತಾಯಿ ಜನಸಾಮಾನ್ಯರ ಸೇವಾ ಸಂಘದಿಂದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಈ ಮೂರು ಸಂಘಟನೆಗಳು ಪ್ರತ್ಯೇಕವಾಗಿ ಗಾಂಧಿ ಪ್ರತಿಮೆ ಸ್ಥಳಕ್ಕೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಆಗಮಿಸಿ, ಧರಣಿ ನಿರತರಾದರು.
ಚೆಕ್ಕೇರ ಕುಟುಂಬಸ್ಥರ ಅಧ್ಯಕ್ಷ ಸಿ.ಕೆ. ಕಾಳಯ್ಯ, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನಿರ್ದೇಶಕ ವಾಸು ಕುಟ್ಟಪ್ಪ, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಸೋಮಯ್ಯ ಮತ್ತಿತರರು ಪಾಲ್ಗೊಂಡು ಮಾತನಾಡಿದರು.
ಬಿರುನಾಣಿಯ ಮರೆನಾಡು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಳಿಮಾಡ ಕಾರ್ಯಪ್ಪ, ಉಪಾಧ್ಯಕ್ಷ ಕರ್ತಮಾಡ ನಾಣಯ್ಯ, ಕಾರ್ಯದರ್ಶಿ ಚೊಟ್ಟಂಗಡ ಕಾಶಿ, ಪದಾಧಿಕಾರಿಗಳಾದ ಅಣ್ಣೀರ ಪೆಮ್ಮಯ್ಯ, ಕಾಳಿಮಾಡ ಗೋಕುಲ ಗಣಪತಿ, ಅಣ್ಣೀರ ಪೊನ್ನಪ್ಪ ಮತ್ತು ಸದಸ್ಯರು ಕುಂದ-ಈಚೂರು ಗ್ರಾಮದ ಶ್ರೀಮಾತಾಯಿ ಜನಸಾಮಾನ್ಯರ ಸೇವಾ ಸಂಘದ ಪದಾಧಿಕಾರಿಗಳು, ತಾಲೂಕು ಹೋರಾಟ ಸಮಿತಿ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.