ಮಡಿಕೇರಿ, ಜ. 4: ಕಡಗದಾಳು ಶ್ರೀ ಬೊಟ್ಲಪ್ಪ ಯುವಕ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಪ್ರತಿ ತಿಂಗಳು ಅರ್ಥ ಪೂರ್ಣ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರುತಿದ್ದು, ಪ್ರಸಕ್ತ ಸಾಲಿನ ಕೊನೆಯ ತಿಂಗಳ ಕಾರ್ಯ ಕ್ರಮವಾಗಿ ಶ್ರೀ ಬೊಟ್ಲಪ್ಪ ಯುವ ಸಂಘದ ಕಟ್ಟಡದಲ್ಲಿ ಪ್ರತಿ ವರ್ಷ ಭತ್ತದ ಕೃಷಿ ಮಾಡುವ ಕಡಗದಾಳು ಗ್ರಾಮದ ಅನ್ನದಾತರನ್ನು ಸನ್ಮಾನಿಸುವ ಜೈ ಕಿಸಾನ್ ಕೃಷಿಕರಿಗೆ ನಮನ ಎಂಬ ಕಾರ್ಯಕ್ರಮ ನಡೆಯಿತು.

ಕಡಗದಾಳು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಯುವ ಸಂಘದ ಅಧ್ಯಕ್ಷ ಸಿ.ಕೆ ಮಂಜು ಮತ್ತು ಯುವ ಸಂಘದ ಮಹಿಳಾ ಉಪಾಧ್ಯಕ್ಷೆ ಕೆ.ಬಿ ದಮಯಂತಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಯುವ ಸಂಘದ ಸ್ಥಾಪಕನಾಧ್ಯಕ್ಷ ಬಿ.ಎಸ್ ಜಯಪ್ಪ ಮಾತನಾಡಿದರು. ಕಡಗದಾಳು ವ್ಯಾಪ್ತಿಯ ಕೃಷಿಕರಾದ ಮಾದೇಟಿರ ತಿಮ್ಮಯ್ಯ, ಎಂ. ಎಸ್. ಶಂಭಯ್ಯ, ಕೆಚ್ಚೇಟಿರ ಪೂಣಚ್ಚ, ಮಾದೇಟಿರ ಜೀವನ್, ಮುಕ್ಕಾಟಿರ ತಿಮ್ಮಯ್ಯ, ಮುಕ್ಕಾಟಿರ ರಿನೇಶ್, ಮಾಳಿಗೆ ತಿಮ್ಮಯ್ಯ, ಕೇಕಡ ಗಣಪತಿ, ಬಡ್ಡನ ಭಾರತಿ ದಿನೇಶ್, ಮಾಲಿಗೆ ಶ್ರೀಧÀರ, ಮಾದೇಟಿರ ದೇವಯ್ಯ, ಮಾಲಿಗೆ ನವೀನ ಇವರುಗಳನ್ನು ಸಂಘದ ಹಿರಿಯ ಸದಸ್ಯರುಗಳು ಸನ್ಮಾನಿಸಿದರು. ನಂತರ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿ.ಎಸ್. ಜಯಪ್ಪ ನಿರೂಪಿಸಿದರು. ಅವಿನಾಶ್ ಬೊಟ್ಲಪ್ಪ ಸ್ವಾಗತಿಸಿ, ವಂದಿಸಿದರು.