ವೀರಾಜಪೇಟೆ, ಜ. 4: ಗ್ರಾಮೀಣ ಪ್ರದೇಶದ ಸಂಸ್ಕøತಿಯ ಸೊಗಡು ಅಚಾರ-ವಿಚಾರಗಳೇ ನಮ್ಮ ಆಸ್ತಿ ಎಂದು ಜನತಾ ದಳದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಪಟ್ಟಣದ ದೊಡ್ಡಟ್ಟಿ ಚೌಕಿ ಬಳಿಯಲ್ಲಿ ಚೌಕಿ ಫ್ರೇಂಡ್ಸ್ ವತಿಯಿಂದ ಹೊಸ ವರ್ಷ ಆಚರಣೆಯ ಪ್ರಯುಕ್ತ ಆಯೋಜಿಸ ಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವೇಶ್ವರ ದೇವಾಲಯದ ಅಧ್ಯಕ್ಷ ಹಿರಿಯ ವಕೀಲ ಎನ್.ಜಿ. ಕಾಮತ್ ಮಾತನಾಡಿದರು.

ಸಮಾರಂಭದಲ್ಲಿ ಇಲ್ಲಿನ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ಹೆಚ್.ಎಂ. ಬನ್ನಾರಿ, ಹಿರಿಯ ಬಡಗಿ ಹಾಗೂ ಜಲ ಪರಿಶೋಧಕ ನೆಹರು ನಗರದ ಚಾಮಿ, ಟೈಲರ್ ವೃತ್ತಿಯಲ್ಲಿ ಹಿರಿಯ ಟಿ.ಆರ್. ಸುಂದರ, ನಿವೃತ್ತ ಪೌರ ಕಾರ್ಮಿಕ ಬನ್ನಮ್ಮ ಕಣ್ಣನ್ ಇವರುಗಳಿಗೆ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಡಿ.ಎಂ. ರಾಜ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ಜೆ.ಎನ್. ಪುಷ್ಪರಾಜ್, ವಕೀಲ ಬಿ.ಎ. ಕೃಷ್ಣಮೂರ್ತಿ, ಪಟ್ಟಣ ಪಂಚಾಯಿತಿ ನಾಮಕರಣ ಸದಸ್ಯ ಪಟ್ಟಡ ರಂಜಿ ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷ ಎನ್. ನರೇಂದ್ರ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಸಿ. ಶಭರಿಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಪಿ. ರಾಜೇಶ್ ಪದ್ಮನಾಭ ಸ್ವಾಗತಿಸಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ವಂದಿಸಿದರು.