ಮಡಿಕೇರಿ, ಜ. 4: ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ಪಣಿ ಎರವರ ಮಂಜುಳ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಕೇರಳದ ಕಣ್ಣೂರು ಜಿಲ್ಲೆಯ ತೊಟ್ಟಡ ಅಮ್ಮು ಪರಂಬು ಎಂಬಲ್ಲಿನ ಆಶ್ರಮದಿಂದ ತನ್ನ ಮಕ್ಕಳನ್ನು ಬಿಡುಗಡೆಗೊಳಿಸಿಕೊಡುವಂತೆ ಅಳಲು ತೋಡಿಕೊಂಡಿದ್ದಾರೆ.
ದೂರಿನಲ್ಲಿ ತನ್ನ ಹಿರಿಯ ಪುತ್ರಿಯನ್ನು ಆಶ್ರಮದವರು ಗಮನಕ್ಕೆ ತಾರದೆ ವಿವಾಹ ಮಾಡಿಸಿದ್ದು, ಇನ್ನಿಬ್ಬರಾದ ಹದಿನೈದು, ಹದಿಮೂರು ವರ್ಷದ ಹೆಣ್ಣು ಮಕ್ಕಳನ್ನು ನೋಡಲು ಕೂಡ ಬಿಡುತ್ತಿಲ್ಲವೆಂದು ಆರೋಪಿಸಿದ್ದಾರೆ. ಕಳೆದ ಏಳು ವರ್ಷದಿಂದ ಮಕ್ಕಳು ಈ ಅಪೂರ್ವ ಆಶ್ರಮದಲ್ಲಿದ್ದು, ಕೂಡಲೇ ಸೂಕ್ತ ಕ್ರಮದೊಂದಿಗೆ ತನ್ನ ವಶಕ್ಕೆ ನೀಡುವಂತೆ ಗಮನ ಸೆಳೆದಿದ್ದಾರೆ.