ಸುಂಟಿಕೊಪ್ಪ, ಜ. 4: ಇಂದಿನ ಪುಟಾಣಿ ಮಕ್ಕಳ ಸ್ಪರ್ಧೆಯು ಭವಿಷ್ಯದಲ್ಲಿ ಉನ್ನತವಾಗಿ ವೇದಿಕೆಗಳನ್ನು ಹಂಚಿಕೊಳ್ಳಲು ಸಾದ್ಯವಾಗುತ್ತದೆ ಎಂದು ಕೊಡಗರ ಹಳ್ಳಿ ನಾಡು ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಅಭಿಪ್ರಾಯಪಟ್ಟರು.
ಇಲ್ಲಿನ ಜ್ಞಾನಧಾರ ಶಿಶುವಿಹಾರದಲ್ಲಿ ನಡೆದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಪುಟಾಣಿ ಮಕ್ಕಳು ಆಂಜನೇಯ, ಭಾರತ ಮಾತೆ, ಟಿಪ್ಪು ಸುಲ್ತಾನ್, ಪೊಲೀಸ್, ಸೈನಿಕ, ಹಣ್ಣು, ತರಕಾರಿ ಇನ್ನಿತರ ವೇಷಗಳನ್ನು ಧರಿಸಿ ಸ್ಪರ್ಧೆಗೆ ಪೈಪೋಟಿ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶುವಿಹಾರದ ಅಧ್ಯಕ್ಷೆ ಲೀಲಾ ಮೇದಪ್ಪ ವಹಿಸಿದ್ದರು. ಮುಖ್ಯ ಶಿಕ್ಷಕಿ ಶಾಂತಿ, ನಿರ್ದೇಶಕರಾದ ಸರೋಜಿನಿ, ಪಾರ್ವತಿ, ಶಿಕ್ಷಕಿ ಪೃಥ್ವಿ, ಶೀಲಾ, ಪೋಷಕರು ಇದ್ದರು.