ಮಡಿಕೇರಿ, ಜ. 3: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ತಾ. 7 ರಂದು ಬ್ರಾಹ್ಮಣ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಬಾಲ ವಿಭಾಗದಲ್ಲಿ ನರ್ಸರಿ, ಎಲ್‍ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ದೇವರನಾಮ, ಕಾಳು ಹೆಕ್ಕುವದು, 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ‘ನಿಮ್ಮ ದೃಷ್ಟಿಯಲ್ಲಿ ಪ್ರಕೃತಿ’ ಚಿತ್ರಕಲೆ ಹಾಗೂ ಭಾವಗೀತೆ, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಬರಹ, ಜನಪದ ಗೀತೆ, ಪ್ರೌಢ ವಿಭಾಗದಲ್ಲಿ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಶುಭಾಷಣ, ರಸಪ್ರಶ್ನೆ, ಬರಹ, ಪಿಯುಸಿ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಭಾಷಣ 10 ನಿಮಿಷ, ಮಹಿಳೆಯರಿಗೆ ಅಡುಗೆ ಹುತ್ತರಿ ಉಂಡೆ (ತಂಬಿಟ್ಟುಂಡೆ ಮಾಡಿ ತರುವದು), ಪುರುಷರಿಗೆ ಡಾ. ರಾಜ್‍ಕುಮಾರ್ ಅಭಿನಯದ ಗಾಯನ ಚಲನಚಿತ್ರ ಗೀತೆ ಹಾಡುವದು ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.