ವೀರಾಜಪೇm,É ಜ. 3: ವಿಜಯಪುರದಲ್ಲಿ ದಲಿತ ವರ್ಗಕ್ಕೆ ಸೇರಿದ ದಾನಮ್ಮನ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಹಾಗೂ ಕೋರೆಗಾಂವ್ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ತಾ:6ರಂದು ಮಡಿಕೇರಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಲಾಗುವದು ಎಂದು ಸಮಾನ ಮನಸ್ಕರ ಒಕ್ಕೂಟದ ಸಂಚಾಲಕ ಬಿ.ಕೆ.ಅಪ್ಪು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬಿಗಿ ಇಲ್ಲದ್ದರಿಂದ ಅಮಾಯಕಿ ದಾನಮ್ಮಳ ಮೇಲೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರಿದರು. ಒಕ್ಕೂಟದ ನಿರ್ದೇಶಕ ಎಚ್.ಆರ್.ಗಣೇಶ್, ವೈ.ಆರ್. ಶಿವಪ್ಪ, ಮಹಿಳಾ ಘಟಕದ ಕಾವ್ಯ ಉಪಸ್ಥಿತರಿದ್ದರು.