ನಾಪೆÇೀಕ್ಲು, ಜ. 3: ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದರೆ ಅವರ ಪ್ರತಿಭೆಯನ್ನು ಹೊರಹಾಕಲು ಸರಿಯಾದ ಮೂಲಭೂತ ವ್ಯವಸ್ಥೆ ಗಳಿಲ್ಲ ಹಾಗೂ ಕ್ರೀಡಾಪಟುಗಳ ಆಯ್ಕೆಗೂ ಉತ್ತಮ ಸ್ಪಂದನೆ ದೊರಕುತ್ತಿಲ್ಲ. ಸರಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸರಕಾರವನ್ನು ಆಗ್ರಹಿಸಿದರು.

ಕುಂಜಿಲ ಗ್ರಾಮದ ಲಕ್ಕಿ ಫ್ರೆಂಡ್ಸ್ ಯುವಕ ಸಂಘ ಹೊಸ ವರ್ಷದ ಪ್ರಯುಕ್ತ ಕುಂಜಿಲ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶ ವಿಶಾಲ ಮತ್ತು ವಿಭಿನ್ನ ಸಂಸ್ಕøತಿ ಯನ್ನು ಹೊಂದಿದೆ. ವೈವಿಧ್ಯಮಯ ಗ್ರಾಮೀಣ ಸೊಗಡು, ಗ್ರಾಮೀಣ ಕ್ರೀಡೆಗಳು ಕೂಡ ಇಂದು ಜಿಲ್ಲೆಯಲ್ಲಿ ಜೀವಂತವಾಗಿವೆ ಎಂದರು.

ಕ್ರೀಡಾಕೂಟವನ್ನು ಜಾತಿ ಮತ ಬೇಧವಿಲ್ಲದೆ ಸಂಭ್ರಮದಿಂದ ಆಚರಿಸುತ್ತಿರುವದು ಸಂತಸ ತಂದಿದೆ. ಸರಕಾರ ಮಾಡಬೇಕಾದ ಕೆಲಸಗಳನ್ನು ಜಿಲ್ಲೆಯ ಯುವಕ ಸಂಘಗಳು ಮಾಡುವದರ ಮೂಲಕ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಾ ಬರುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ಹಾಕಿ, ವಾಲಿಬಾಲ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿಯೂ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮೀಣ ಪ್ರದೇಶದಲ್ಲಿಯೂ ಕ್ರೀಡಾಪಟುಗಳ ಆಯ್ಕೆಗೆ ಕ್ರಮಕೈಗೊಳ್ಳಬೇಕು. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ, ಜೆಡಿಎಸ್ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ಪಿ.ಎಂ. ರಶೀದ್, ಮಕ್ಕಿ ನಾಸಿರ್, ಸಾಫಿ ಕೊಟ್ಟಮುಡಿ, ಹಂಸ ಕೊಟ್ಟಮುಡಿ, ಹ್ಯಾರಿಸ್ ಕೊಳಕೇರಿ, ವಯಕೋಲ್ ಉಸ್ಮಾನ್, ಪೈಯ್‍ನರಿ ಜಮಾಅತ್ ಅಧ್ಯಕ್ಷ ಅದಪೆÇಳೆ ಮಹಮ್ಮದ್ ಹಾಜಿ ಇದ್ದರು.

20 ತಂಡಗಳು ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ಕಡಂಗದ ಲಿಮ್ರಾ ಫ್ರೆಂಡ್ಸ್ ಪ್ರಥಮ, ಮೂರ್ನಾಡಿನ ಗೌತಮ್ ಫ್ರೆಂಡ್ಸ್ ದ್ವಿತೀಯ, ನಾಪೆÇೀಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ತಂಡಗಳು ತೃತೀಯ ಬಹುಮಾನ ಪಡೆಯಿತು.