ಸೋಮವಾರಪೇಟೆ, ಜ. 3: ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ಕಾಳುಮೆಣಸು ಬೆಳೆಗಳ ಕ್ಷೇತ್ರೋತ್ಸವ ನಡೆಯಿತು.

ವಿನಯ್ ಅವರ ಕಾಳುಮೆಣಸು ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಅವರು, ಕಾಳುಮೆಣಸು ಬಳ್ಳಿಗಳನ್ನು ರೋಗಬಾಧೆಯಿಂದ ರಕ್ಷಿಸಲು ರೈತರು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಮಾದಾಪುರ ಗ್ರಾ.ಪಂ. ಸದಸ್ಯ ಉಮೇಶ್, ತಾ.ಪಂ. ಇಒ ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಹಿರಿಯ ಅಧಿಕಾರಿಗಳಾದ ಶರತ್, ಬೋಪಯ್ಯ ಮತ್ತಿತರರು ಇದ್ದರು.