ವೀರಾಜಪೇಟೆ, ಜ. 3: ವೀರಾಜಪೇಟೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ಚಟುವಟಿಕೆಗಳ ಸ್ವಚ್ಛ ಸರ್ವೇಕ್ಷಣ 2018 ಅಭಿಯಾನವನ್ನು ಅಧ್ಯಕ್ಷ ಇ.ಸಿ ಜೀವನ್ ಉದ್ಘಾಟಿಸಿದರು.

ಅಭಿಯಾನದ ಪ್ರಯುಕ್ತ ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ನಗರದ ಮುಖ್ಯ ಬೀದಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪಂಚಾಯಿತಿ ಸದಸ್ಯರುಗಳು, ಕಾರ್ಮಿಕರು, ಸಿಬ್ಬಂದಿಗಳು ಸಾರ್ವಜನಿಕರು, ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.ಜಾಥಾದಲ್ಲಿ ವೀರಾಜಪೇಟೆ ರೋಟರಿ ಕ್ಲಬ್, ರೋಟರಿ ಶಾಲೆ, ಕೂರ್ಗ್‍ವ್ಯಾಲಿ ಶಾಲೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಭಾಗವಹಿಸಿದ್ದರು. ಜಾಥಾದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಭಿಯಂತರ ಎನ್.ಪಿ.ಹೇಮ್ ಕುಮಾರ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.