ಸೋಮವಾರಪೇಟೆ, ಜ. 3: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಶ್ರೀ ಮಲ್ಲೇಶ್ವರ ಸಮುದಾಯ ಭವನ ಕಟ್ಟಡದ ಮುಂದುವರಿದ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್, ತಮ್ಮ ನಿಧಿಯಿಂದ ರೂ. 1 ಲಕ್ಷಗಳ ಅನುದಾನವನ್ನು ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಕುಸುಮಾ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಬೇಕು. ತಾಪಂ ಸದಸ್ಯರಿಗೆ ಅನುದಾನ ಕಡಿಮೆಯಿದ್ದು, ಸಿಕ್ಕ ಅನುದಾನವನ್ನು ಅವಶ್ಯಕ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳ ಇನ್ನಿತರ ಕಾಮಗಾರಿಗಳಿಗೆ ಅನುದಾನ ನೀಡಲಾಗುವದು ಎಂದು ಹೇಳಿದರು.
ಈ ಸಂದರ್ಭ ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎನ್. ವಸಂತ್, ಕಾರ್ಯದರ್ಶಿ ಹೆಚ್.ಎಂ. ಕೀರ್ತಿ, ಆಡಳಿತ ಮಂಡಳಿ ಹೆಚ್.ಕೆ. ಅಜಿತ್, ಜಿ.ಕೆ. ವಿಜಯ, ಎಚ್.ಆರ್. ದರ್ಶನ್ ಮತ್ತಿತರರು ಇದ್ದರು.