ಸೋಮವಾರಪೇಟೆ, ಜ. 3: ಅವಿವಾಹಿತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಾನ್ವೆಂಟ್ ಬಾಣೆಯಲ್ಲಿ ನಡೆದಿದೆ.

ಕಾನ್ವೆಂಟ್‍ಬಾಣೆ ನಿವಾಸಿ ಚಂದ್ರ ಮತ್ತು ಗಂಗಮಣಿ ಅವರ ಪುತ್ರ ಹರೀಶ್ (25) ಎಂಬಾತನೇ ಸಾವನ್ನಪ್ಪಿದವನಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಿನ್ನೆ ಸಂಜೆ ವಿಷ ಸೇವಿಸಿ ಅಸ್ವಸ್ಥನಾಗಿದ್ದ ಹರೀಶ್‍ನನ್ನು ಸೋಮವಾರಪೇಟೆ ಸರ್ಕಾರಿ ಅಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿತ್ತು.

ನಂತರ ರಾತ್ರಿ ಮಡಿಕೇರಿಯಿಂದ ಮೈಸೂರಿನ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.