ಮೂರ್ನಾಡು, ಜ. 2: ಇಲ್ಲಿಗೆ ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾ. 5ರಂದು ನಡೆಯಲಿದೆ.
ಸುಂಟಿಕೊಪ್ಪ ಸ್ವಸ್ಥದ ನಿರ್ದೇಶಕಿ ತೇಲಪಂಡ ಆರತಿ ಸೋಮಯ್ಯ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಚೆಟ್ಟಿಜನ ಸುಬ್ರಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕ ಪೈತಡಿಯಂಡ ಹೊನ್ನಮ್ಮ ದೇವಯ್ಯ ವಹಿಸಲಿದ್ದಾರೆ.