ಪೊನ್ನಂಪೇಟೆ, ಜ.2 ತಮ್ಮ ನೆಲದಲ್ಲಿ ಬೆಳೆದ ಮರದ ಮಾಲೀಕತ್ವ ಸಂಪೂರ್ಣವಾಗಿ ಭೂ ಮಾಲೀಕನಿಗೆ ದೊರೆಯಬೇಕು. ಭೂ ಮಾಲೀಕನೆ ಮರದ ಮಾಲೀಕನೆಂಬ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿ ಸಿರುವ ಹಿರಿಯ ಹೋರಾಟಗಾರ, ರಾಜ್ಯ ವಿಧಾನಪರಿಷತ್ತಿನ ಪ್ರತಿಪಕ್ಷದ ಮಾಜಿ ನಾಯಕ ಎ.ಕೆ. ಸುಬ್ಬಯ್ಯ ಅವರು, ಇದು ತಮ್ಮ ಸಾರ್ವಜನಿಕ ಜೀವನದ ಬಹುಕಾಲದ ಆಸೆಯಾಗಿದೆ ಎಂದು ಹೇಳಿದರು.ವಯೋಸಹಜ ಅನಾರೋಗ್ಯ ದಿಂದಾಗಿ ವಾಹನಗಳಲ್ಲಿ ತಾಸುಗಟ್ಟಲೆ ಪ್ರಯಾಣವನ್ನು ತಜ್ಞ ವೈದ್ಯರು ನಿರ್ಭಂಧಿಸಿರುವದರಿಂದ ಹುದಿಕೇರಿ ಸಮೀಪದ ಕೋಣಗೇರಿಯ ತಮ್ಮ ತೋಟದ ನಿವಾಸದಲ್ಲಿ ನಡೆಯಲಿರುವ ತಮ್ಮ ದಿವಂಗತ ಪತ್ನಿ ಡಾಟಿ ಸುಬ್ಬಯ್ಯ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಎ.ಕೆ. ಸುಬ್ಬಯ್ಯ ಅವರು, ನಿವಾಸಕ್ಕೆ ತೆರಳುವ ಮುನ್ನ ಹುದಿಕೇರಿಯ ಜನತಾ ಪ್ರೌಢಶಾಲೆಯ ಮುಂಭಾಗದ ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‍ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ, ಭೂಮಿಯಲ್ಲಿ ಬೆಳೆದ ಮರದ ಹಕ್ಕು ಭೂಮಿಯ ಯಜಮಾನನಿಗೆ ಸೇರಬೇಕೆಂಬ ಮರದ ಮಾಲೀಕತ್ವದ ತಮ್ಮ ಹೋರಾಟ ಪೂರ್ಣವಾಗಿ ಯಶಸ್ವಿ ಯಾಗಲಿಲ್ಲ. ತಮ್ಮ ಸಾರ್ವಜನಿಕ ಹೋರಾಟ ಬದುಕಿನಲ್ಲಿ ಅಪೂರ್ಣ ಗೊಂಡ ಚಳುವಳಿ ಇದಾಗಿದೆ.