ಗುಡ್ಡೆಹೊಸೂರು, ಜ. 2: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚನೆ ಹೋರಾಟದ ಮೂರನೇ ಹಂತಕ್ಕೆ ಸ್ಥಾನೀಯ ಸಮಿತಿಗಳ ಸಭೆಗಳನ್ನು ನಡೆಸಲಾಯಿತು.

ಈ ಸಂಬಂಧ ಗುಡ್ಡೆಹೊಸೂರಿ ನಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತು ಗುಡ್ಡೆಹೊಸೂರು ಸ್ಥಾನೀಯ ಸಮಿತಿಯ ಆಧ್ಯಕ್ಷ ಕೋಡಿ ಪೂವಯ್ಯ ಮತ್ತು ಸದಸ್ಯರು ಹಾಜರಿದ್ದರು. ಜನವರಿ 1 ರಿಂದ ಕುಶಾಲನಗರದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಈ ಸಂದರ್ಭ ತೀರ್ಮಾನಿಸಲಾಯಿತು. ಅಲ್ಲದೆ ಜನವರಿ 9 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಸಂದರ್ಭ ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಲಾಯಿತು.