ಮಡಿಕೇರಿ, ಜ. 2: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮುಖ್ಯ ಮಂತ್ರಿಗಳ ವಿಶೇಷ ಪ್ಯಾಕೇಜ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅನುದಾನದಲ್ಲಿ ಕೈಗೊಳ್ಳಬೇಕಿರುವ ರೂ. 64 ಲಕ್ಷಗಳ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ವೀಣಾ ಅಚ್ಚಯ್ಯ ಅವರೊಂದಿಗೆ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಬಿ.ಎಸ್., ವಲಯ ಕಾಂಗ್ರೆಸ್ ಅಧ್ಯಕ್ಷ ಪೆರುಮಂಡ ಸುರೇಶ್, ಹನೀಫ್ ಸಂಪಾಜೆ, ಶ್ರೀ ಸುರೇಶ್ ಸಂಪಾಜೆ, ಬಂಗಾರುಕೋಡಿ ಪುರುಷೋತ್ತಮ್, ನಂದಿನೆರವಂಡ ಮಧು, ಪಿ.ಎಂ. ಬೋಜಪ್ಪ, ಪಿ.ಎನ್. ಅಬೂಬಕರ್, ವಿವೇಕಾನಂದ, ಪ್ರೇಮಚಂದ್ರ, ಪಾಶ್ರ್ವನಾಥ್, ಫೈಝಲ್ ಮತ್ತು ಮನು ಪೆರುಮಂಡ ಇವರುಗಳು ಭಾಗವಹಿಸಿದ್ದರು.