ಆಲೂರು-ಸಿದ್ದಾಪುರ, ಜ. 2: ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಕೊಡ್ಲಿಪೇಟೆ, ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕೊಡ್ಲಿಪೇಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸತ್ಯನಾರಾಯಣ ಪೂಜೆ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ವತಿಯಿಂದ ಶನಿವಾರಸಂತೆಯ ಪತ್ರಕರ್ತ ಹೆಚ್.ಆರ್. ಹರೀಶ್ ಕುಮಾರ್, ಕೆ.ಎನ್. ದಿನೇಶ್ ಮಾಲಂಬಿ, ಚೆರಿಯಮನೆ ಸುರೇಶ್, ವಿ.ಸಿ. ಸುರೇಶ್ ಒಡೆಯನಪುರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಧವರ್iಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೊಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ, ಕಾಫಿ ಬೆಳೆಗಾರರಾದ ಕಾಂತ್ ರಾಜ್, ಮಂಜುನಾಥ್, ಶೈಲಾ, ಶರತ್, ಪವನ್, ನಳಿನಿ, ಯಶೋದ, ಶೋಭಾ, ನೇತ್ರಾವತಿ ಮುಂತಾದವರಿದ್ದರು.