ನಾಪೆÇೀಕ್ಲು, ಜ. 2: ಇತ್ತೀಚೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಾಷ್ಟ್ರೀಯ ಪ್ರತಿಭಾ ಕಲೋತ್ಸವದ ಅಖಂಡ ಕರ್ನಾಟಕ ಚುಟುಕು ಸಾಹಿತ್ಯ ಮತ್ತು ಸಾಂಸ್ಕøತಿಕ ದ್ವಿತೀಯ ಸಮ್ಮೇಳನದಲ್ಲಿ ಭರತನಾಟ್ಯದಲ್ಲಿ ಸಾಧನೆ ಮಾಡಿದ ಕೊಡಗಿನ ಕುವರಿ ಸುರಕ್ಷಾ ವೈಲಾಯ ಅವರನ್ನು ರಾಷ್ಟ್ರೀಯ ಬೆಳ್ಳಿಕಿರಣ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈಕೆ ಅಮ್ಮತ್ತಿಯ ಗುಡ್ ಶೆಫರ್ಡ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ, ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಅವರ ಶಿಷ್ಯೆಯಾಗಿದ್ದು, ಒಂಟಿಯಂಗಡಿ ಕಣ್ಣಂಗಾಲ ಗ್ರಾಮದ ಶಂಕರನಾರಾಯಣ ವೈಲಾಯ ಮತ್ತು ಉಷಾ ಶಂಕರ್ ದಂಪತಿಗಳ ಪುತ್ರಿಯಾಗಿದ್ದಾಳೆ.