ಸೋಮವಾರಪೇಟೆ, ಜ. 2: ಲಯನ್ಸ್ ಸಂಸ್ಥೆಯ ವತಿಯಿಂದ ಬೇಳೂರು ಎಸ್.ಜೆ.ಎಂ. ವೃದ್ಧಾಶ್ರಮದ ಆಶ್ರಯದಾತರಿಗೆ ಕಂಬಳಿಗಳನ್ನು ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಸಂಸ್ಥೆಯ ಹಿರಿಯ ಸದಸ್ಯ ಕೆ. ಎ. ಪಾಲಾಕ್ಷ ಜ್ಞಾಪಕಾರ್ಥವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಅಧ್ಯಕ್ಷ ಎ. ಎಸ್. ಮಹೇಶ್ ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರತಾಪ್ ಈರಪ್ಪ, ಜಲಜಾ ಶೇಖರ್, ಕಾರ್ಯಪ್ಪ ರೈ, ಜಗದೀಶ್, ವಸಂತಿ ಲೀಲಾರಾಮ್, ರೋಹಿತ್, ಜಗದೀಶ್, ಕೆ.ಪಿ. ರಾಯ್ ಮತ್ತಿತರರು ಉಪಸ್ಥಿತರಿದ್ದರು.