ನಾಪೆÇೀಕ್ಲು, ಜ. 2 : ನವ ಭಾರತ್ ಕಂಪೆನಿ ವತಿಯಿಂದ ಸಾವಯವ ಗೊಬ್ಬರ ಬಳಕೆ ಬಗ್ಗೆ ಮತ್ತು ಕಾಫಿ ಕ್ಷೇತ್ರೋತ್ಸವವನ್ನು ಹಮ್ಮಿ ಕೊಳ್ಳಲಾಗಿತ್ತು. ಈ ಸಂದರ್ಭ ಕಳೆದ ನಾಲ್ಕು ವರ್ಷಗಳಿಂದ ಸಾವಯವ ಗೊಬ್ಬರ ಬಳಸಿ ಕಾಫಿ ಮತ್ತು ಕರಿಮೆಣಸು ಬೆಳೆಸಿ ಉತ್ತಮ ಫಸಲು ಪಡೆಯುವಲ್ಲಿ ಯಶಸ್ವಿಯಾದ ಪ್ರಗತಿ ಪರ ರೈತರಾದ ಕುಶಾಲಪ್ಪ ಮತ್ತು ಪೂವಯ್ಯನವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಮೂರ್ತಿ, ಕುಮಾರ ಸ್ವಾಮಿ, ಗ್ರಾಮಸ್ಥರಾದ ಪ್ರವೀಣ್, ಸೋಮಣ್ಣ, ಮಧು, ಪ್ರಶನ್ನ, ಜಯಂತಿ, ದೇವಕ್ಕಿ, ಶಾಂತಿ ಮತ್ತಿತರರು ಇದ್ದರು.