*ಗೋಣಿಕೊಪ್ಪಲು, ಜ. 1: ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ಸರ್ಕಾರಿ ಶಾಲೆಯ 250 ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಹಸಿರು ನಿಶಾನೆ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು. ವೀರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್ ಮತ್ತು ಇಲಾಖೆ ಸಿಬ್ಬಂದಿ ಜಲೇಂದ್ರ, ಪ್ರವಾಸದ ಮಕ್ಕಳ ಮೇಲ್ವಿಚಾರಕ ಈಶ್ವರಿ ದೈ.ಶಿ.ಶಿ. ಬಿಂದು, ಸ.ಶಿ. ಪ್ರಸಾದ್, ವಿಶ್ವನಾಥ್, ರವೀಶ್, ಮಹೇಶ್, ನಳಿನಿ, ಅನಿತ ಕುಮಾರಿ ಹಾಜರಿದ್ದರು.