ವೀರಾಜಪೇಟೆ, ಜ.1: ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ಸೋಮಪದ್ಮ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮುಗಿಸಿ ರಾತ್ರಿ ಹಣದ ಬ್ಯಾಗ್‍ನೊಂದಿಗೆ ಪಟ್ಟಣದ ದಖ್ಖನಿ ಮೊಹಲ್ಲಾದ ಮನೆಗೆ ಹೋಗುತಿದ್ದ ಸುಭಾಶ್ ಮದೇವ್ ಎಂಬವರಿಗೆ ಕೆಲವು ತಿಂಗಳುಗಳ ಹಿಂದೆ ಖಾರದಪುಡಿ ಎರಚಿ ಹಣದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿ ತಲೆ ಮರೆಸಿಕೊಂಡಿದ್ದ ಆರ್ಜಿ ಗ್ರಾಮದ ಪೂಣಚ್ಚ ಅಲಿಯಾಸ್ ಪಪ್ಪು ಎಂಬಾತನನ್ನು ವೀರಾಜಪೇಟೆ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಅವರ ತಂಡ ಪಂಚವಳ್ಳಿ ಬಳಿ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನ ಕ್ಕೊಳಪಡಿಸಿದ್ದಾರೆ.

ಕಾರಪುಡಿ ಎರಚಿ ಹಣದ ಬ್ಯಾಗ್ ಅಪಹರಿಸುವ ಪ್ರಯತ್ನದಲ್ಲಿ 5 ಮಂದಿ ವಿರುದ್ಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಈಗಾಗಲೇ ಅಜ್ಗಾರ್ ಮತ್ತು ಸವಿನ್ ಎಂಬವರುಗಳು ನ್ಯಾಯ ಬಂಧನದಲ್ಲಿದ್ದು, ಆರೋಪಿಗಳ ಸಂಖ್ಯೆ 3ಕ್ಕೆ ಎರಿದೆ. ತಲೆ ಮರೆಸಿ ಕೊಂಡಿರುವ ಇನ್ನು ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಜನ್, ಸುನೀಲ್, ಸತೀಶ್ ಇತರರು ಭಾಗವಹಿಸಿದ್ದರು.