ಸೋಮವಾರಪೇಟೆ, ಜ. 1: ಸಮೀಪದ ಬಿಳಿಗೇರಿ ಗ್ರಾಮದ ಈಶ್ವರ ದೇವಾಲಯದ ಬಾಗಿಲು ಒಡೆದು ಕಾಣಿಕೆ ಹುಂಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಈಶ್ವರ ದೇವಾಲಯದಲ್ಲಿ ಅಳವಡಿಸಿದ್ದ ಎರಡು ಕಾಣಿಕೆ ಹುಂಡಿಯನ್ನು ರಾತ್ರಿ ವೇಳೆ ಕಳ್ಳರು ಅಪಹರಿಸಿದ್ದು, ಸುಮಾರು 35 ಸಾವಿರ ಕಾಣಿಕೆ ಹಣ ಇದ್ದಿರಬಹುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೇವಾಲಯಕ್ಕೆ ಮಡಿಕೇರಿ ಯಿಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಅಪರಾಧ ವಿಭಾಗದ ಠಾಣಾಧಿಕಾರಿ ಮಂಚಯ್ಯ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.