ಸುಂಟಿಕೊಪ್ಪ, ಜ. 1: ಸುಂಟಿಕೊಪ್ಪ ಗ್ರಾಮಾಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಜಿ.ರಾಜನ್ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಅವರನ್ನು ನೇಮಕಗೊಳಿಸಲಾಯಿತು. ಇತ್ತೀಚೆಗೆ ನಡೆದ ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ವಾರ್ಷಿಕ ಮಹಾಸಭೆಯನ್ನು ನಡೆಸಲಾಗಿದ್ದು ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು ಉಪಾಧ್ಯಕ್ಷರಾಗಿ ವಿಲಿಯಂ ಮೈಕಲ್, ಖಂಜಾಚಿಯಾಗಿ ಸುನೀಲ್, ಸಂಘಟನಾ ಕಾರ್ಯದರ್ಶಿಯಾಗಿ ರಜಾಕ್ (ಉಂಡೆ), ಗೌರವಧ್ಯಕ್ಷರಾಗಿ ಮೇನೆಜೆಸ್, ಮಂಜುನಾಥ್, ಎಂ ಉಸ್ಮಾನ್ (ಪ್ರೂಟ್ ಉಸ್ಮಾನ್) ಹಾಗೂ ಕಾರ್ಯಕಾರಿ ಸಮಿತಿಗೆ 26 ಮಂದಿಯನ್ನು ಆಯ್ಕೆಗೊಳಿಸಲಾಯಿತು.