ಸಿದ್ದಾಪುರ, ಜ. 1: ಪಾಲಿಬೆಟ್ಟ ಸಮೀಪದ ಹಂಚಿಕಾಡುವಿನ ಮೇಕೂರು-ಹೊಸ್ಕೇರಿ ಗ್ರಾಮದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಸಭೆ ಹಾಗೂ ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ಮತೀನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಯರವ ಸಮುದಾಯದ ಮುಖಂಡ ವೈ.ಎಂ. ಶಾಂತಕುಮಾರ್ ಹಾಗೂ ಇತರರು ಜೆ.ಡಿ.ಎಸ್.ಗೆ ಸೇರ್ಪಡೆ ಗೊಂಡರು.
ಸಭೆಯಲ್ಲಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಹೆಚ್.ಬಿ. ಪವಿತ್ರಕುಮಾರ್ (ಪ್ರವೀಣ್), ಉಪಾಧ್ಯಕ್ಷ ಹೆಚ್.ಎಂ. ಮಹದೇವ, ಕಾರ್ಯದರ್ಶಿಗಳಾದ ಹೆಚ್.ಎನ್. ವಿಷ್ಣುಮೂರ್ತಿ, ಹೆಚ್.ಎನ್. ರಾಜು, ಜಂಟಿ ಕಾರ್ಯದರ್ಶಿ ಹೆಚ್.ಎಂ. ವಿಜಯ, ಹೆಚ್.ಎಂ. ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಡಿ.ಎಂ. ನೇತ್ರಾವತಿ, ಪರಿಶಿಷ್ಟ ಜಾತಿ/ಪಂಗಡದ ಅಧ್ಯಕ್ಷ ಎಸ್. ಶಾಂತಪ್ಪ, ವೀರಾಜಪೇಟೆ ನಗರ ಅಧ್ಯಕ್ಷ ಮಂಜುನಾಥ್, ಚೆನ್ನಯ್ಯಕೋಟೆ ಸ್ಥಾನೀಯ ಸಮಿತಿಯ ಅಧ್ಯಕ್ಷ ವಿ.ಸಿ. ದೇವರಾಜ್, ಜೆ.ಡಿ.ಎಸ್. ಮುಖಂಡ ಹುಸೈನ್, ರಂಜನ್ನಾಯ್ಡು ಇತರರು ಹಾಜರಿದ್ದರು.