ಶನಿವಾರಸಂತೆ, ಜ. 1: ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ದೇವಾಂಗ ಸಂಘದ ಆಶ್ರಯದಲ್ಲಿ ತಾ. 2 ರಂದು (ಇಂದು) ಬನದ ಹುಣ್ಣಿಮೆ ಮಹೋತ್ಸವ ಜರುಗಲಿದೆ.
ಬೆಳಿಗ್ಗೆ 9 ಗಂಟೆಯಿಂದ ಮಹಾಗಣಪತಿ ಪೂಜೆ, ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಸ್ತ್ರಾಲಂಕಾರ ಸೇವೆ ನಡೆಯಲಿದೆ. ನಂತರ ದೇವತಾ ಪ್ರಾರ್ಥನೆಯೊಂದಿಗೆ ಗಣಪತಿ ಪೂಜೆ, ಯಾಗಶಾಲಾ ಪ್ರವೇಶ, ಪುಣ್ಯಾಹ, ದೇವಿನಾಂದಿ, ನವಗ್ರಹಪೂಜೆ, ದುರ್ಗಾ ಹೋಮ, ಗಣಪತಿ ಹೋಮ ಮತ್ತಿತರ ಪೂಜಾ ಕೈಂಕರ್ಯಗಳು ನಡೆಯಲಿವೆ.