ನಾಪೋಕ್ಲು, ಜ. 1: ಇಲ್ಲಿಗೆ ಸಮೀಪದ ಕೊಟ್ಟಮುಡಿಯಲ್ಲಿ ನವೀಕೃತಗೊಂಡ ಮಸೀದಿಯ ಉದ್ಘಾಟನೆ ಈಚೆಗೆ ನೆರವೇರಿತು. ಮಸೀದಿಯ ಉದ್ಘಾಟನೆಯನ್ನು ಮರ್ಕಜ್ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಹಕೀಂ ಆಝರಿ ನೆರವೇರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ನಾಯಿಬ್‍ಖಾಝಿ ಮಹಮದ್ ಎಡಪಾಲ ವಹಿಸಿದ್ದರು. ಎಸ್‍ವೈಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೂಟುಂಬಾರ ಅಬ್ದುಲ್ ರೆಹಮಾನ್ ದಾರಿಮಿ, ಅಬೂ ಸುಫ್ಯಾನ್, ಸಖಾಫಿ, ತೋಕೆ ಉಸ್ತಾದ್ ಉಪಸ್ಥಿತರಿದ್ದರು. ಮರ್ಕಜ್ ವಿದ್ಯಾಸಂಸ್ಥೆಯ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ, ವಂದಿಸಿದರು.