*ಗೋಣಿಕೊಪ್ಪಲು, ಡಿ. 31: ಬೆಸಗೂರು ಗ್ರಾಮದ ವಿದ್ಯಾರ್ಥಿ ಬಿ.ಎ. ಜೀವನ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆÉ ಆಯ್ಕೆಯಾಗಿದ್ದಾನೆ. ಚಿತ್ರಕಲಾ ಸ್ಪರ್ಧೆ ಧಾರವಾಡದಲ್ಲಿ ನಡೆಯಲಿದೆ.

ತಿತಿಮತಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಹೆಚ್. ಕರಿಯಪ್ಪ ಅವರಿಂದ ತರಬೇತಿ ಪಡೆದ ಜೀವನ್ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.