ಉಗ್ರ ಕಾಳಗ : ನಾಲ್ವರು ಯೋಧರು ಹುತಾತ್ಮ ಶ್ರೀನಗರ, ಡಿ. 31: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮದಲ್ಲಿ ನಡೆದಿರುವ ಧಾಳಿಯಲ್ಲಿ ಈವರೆಗೂ 4 ಸೈನಿಕರು ಹುತಾತ್ಮರಾಗಿದ್ದು, ಸೈನಿಕರ ಗುಂಡಿಗೆ ಮೂವರು ಉಗ್ರರು ಹತರಾಗಿದ್ದಾರೆ. ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆಥ್ ಪೆÇೀರಾದ ಸಿಆರ್‍ಪಿಎಫ್‍ನ 185ನೇ ಬೆಟಾಲಿಯನ್ ಕ್ಯಾಂಪ್ ಮೇಲೆ ಉಗ್ರರು ನಿನ್ನೆ ತಡರಾತ್ರಿ 2 ಗಂಟೆ ಸುಮಾರಿನಲ್ಲಿ ಧಾಳಿ ನಡೆಸಿದ್ದರು. ಭಾರತೀಯ ಸೈನಿಕರ ಮೇಲೆ ಮನಸೋ ಇಚ್ಛೆ ಗುಂಡಿನ ಸುರಿಮಳೆಗರೆದ ಉಗ್ರರು ಅಲ್ಲಿಯೇ ಅಡಗಿ ಧಾಳಿ ನಡೆಸಿದ್ದಾರೆ. ಕೂಡಲೇ ಸೇನೆ ಉಗ್ರರ ವಿರುದ್ಧ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಈವರೆಗೂ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾರ್ಯಾಚರಣೆಯಲ್ಲಿ ಪ್ರಸ್ತುತ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದ್ದು, ಅವಿತಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಅರಂಭಿಸಲಾಗಿದೆ. ಅಂತೆಯೇ ಘಟನಾ ಸ್ಥಳದಲ್ಲಿ ಮತ್ತಷ್ಚು ಉಗ್ರರು ಅವಿತಿರುವ ಸಾಧ್ಯತೆ ಇದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಬಲಮುರಿಯಲ್ಲಿ ಮುಳುಗಿ ಯುವಕ ಸಾವು

ಮಂಡ್ಯ, ಡಿ. 31: ಹೊಸ ವರ್ಷಾಚರಣೆಗೆ ಬಲಮುರಿ ಜಲಪಾತಕ್ಕೆ ವಿಹಾರಕ್ಕೆಂದು ಬಂದಿದ್ದ ಯುವಕನೊಬ್ಬ ಈಜುವ ಸಂದರ್ಭ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನನ್ನು ಮಹಮ್ಮದ್ ಸಾಹಿಲ್ (19) ಎಂದು ಗುರುತಿಸಲಾಗಿದ್ದು ಕೇರಳದವನಾದ ಈತ ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿದ್ದನೆನ್ನಲಾಗಿದೆ. ಹೊಸ ವರ್ಷಾಚರಣೆಯ ಸಂದರ್ಭ ಮಹಮ್ಮದ್ ತನ್ನ 15 ಮಂದಿ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ದನು. ಹೊಸ ವರ್ಷದ ಸಂಭ್ರಮದ ವೇಳೆ ಜಲಪಾತದ ನೀರಿನ ಸೆಳವಿಗೆ ಸಿಕ್ಕು ಸಾಯುವವರ ಸಂಖ್ಯೆ ಹೆಚ್ಚಾಗಿರಲಿದೆ ಎನ್ನುವ ಕಾರಣಕ್ಕೆ ಇಂದು ಹಾಗೂ ನಾಳೆ ಜಲಪಾತ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ನಿಷೇಧದ ನಡುವೆಯೂ ಪೆÇಲೀಸರ ಕಣ್ತಪ್ಪಿಸಿ ಈ ಯುವಕರು ನೀರಿಗಿಳಿದಿದ್ದ. ಪ್ರಕರಣ ಸಂಬಂಧ ಕೆ.ಆರ್. ಸಾಗರ ಪೆÇಲೀಸ್ ಠಾಣೆಯಾಲ್ಲಿ ಪ್ರಕರಣ ದಾಖಲಾಗಿದೆ.

ರಿವಾಲ್ವರ್ ತೋರಿಸಿ ಗ್ರಾ.ಪಂ. ಸದಸ್ಯರ ಅಪಹರಣ

ಕೊಪ್ಪಳ, ಡಿ. 31: ಕೊಪ್ಪಳ ಜಿಲ್ಲೆ ಆನೆಗುಂದಿ ದುರ್ಗಾದೇವಿ ದರ್ಶನಕ್ಕೆಂದು ಬಂದಿದ್ದ ಗ್ರಾಮ ಪಂಚಾಯಿತಿ 6 ಮಂದಿ ಸದಸ್ಯರಿಗೆ ರಿವಾಲ್ವರ್ ತೋರಿಸಿ ಅಪಹರಿಸಿರುವ ಘಟನೆ ಗಂಗಾವತಿ ಪೆÇೀಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೊಮ್ಮನಾಳ ಗ್ರಾಮ ಪಂಚಾಯಿತಿ ಸದಸ್ಯರು ಅಪಹರಣಕ್ಕೆ ಈಡಾಗಿದ್ದಾರೆ. ಹೀಗೆ ಅಪಹರಣವಾದವರಲ್ಲಿ ಐವರು ಮಹಿಳಾ ಸದಸ್ಯೆಯರೂ ಸೇರಿದ್ದಾರೆ. ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷರ ವಿರುದ್ಧ ಮತ ಚಲಾಯಿಸುತ್ತಾರೆ ಎನ್ನುವ ನೆಪದಿಂದ ಈ ಅಪಹರಣ ನಡೆದಿದೆ ಎನ್ನಲಾಗಿದೆ. ವಿರೋಧಿ ಗುಂಪಿನವರು ಈ ಕೃತ್ಯ ಎಸಗಿದ್ದು ಏಳು ಮಂದಿ ಪಂಚಾಯಿತಿ ಸದಸ್ಯರು ಹಾಗೂ ವಾಹನವನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತದಲ್ಲಿದ್ದಾರೆ 17 ನಕಲಿ ಬಾಬಾಗಳು

ಅಲಹಾಬಾದ್, ಡಿ. 31: 17 ನಕಲಿ ಬಾಬಾಗಳು ಮತ್ತು ಸ್ವಯಂ ಘೋಷಿತ ದೇವಮಾನವರ ಎರಡನೇ ಪಟ್ಟಿಯನ್ನು ಅಖಿಲ ಭಾರತೀಯ ಅಖರ ಪರಿಷತ್ ಬಿಡುಗಡೆ ಮಾಡಿದೆ. ಹೊಸ ಪಟ್ಟಿಯಲ್ಲಿ ದೆಹಲಿಯ ವೀರೇಂದ್ರ ದೇವ ದೀಕ್ಷಿತ್, ಉತ್ತರ ಪ್ರದೇಶದ ಬಸ್ತಿಯ ಸಚ್ಚಿದಾನಂದ ಸರಸ್ವತಿ ಮತ್ತು ಅಲಹಾಬಾದಿನ ತ್ರಿಲಾಕ್ ಭವಂತ್ ಇದ್ದಾರೆ. ಹಿಂದೂ ಸಾಧುಗಳ ಕೇಂದ್ರ ಅಂಗ ಕಳೆದ ಸೆಪ್ಟೆಂಬರ್‍ನಲ್ಲಿ 14 ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್, ರಾಧೆ ಮಾ, ನಿರ್ಮಲಾ ಬಾಬಾ, ರಾಂಪಲ್, ಅಸರಮ್ ಬಾಪು ಮತ್ತು ಆತನ ಪುತ್ರ ನಾರಾಯಣ್ ಸಾಯಿ ಸೇರಿದ್ದಾರೆ. ಕಳೆದ ವಾರ 47 ಮಹಿಳೆಯರನ್ನು ಮತ್ತು 6 ಅಪ್ರಾಪ್ತ ಬಾಲಕಿಯರನ್ನು ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ನಕಲಿ ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಅಕ್ರಮವಾಗಿ ನಡೆಸುತ್ತಿರುವ ಮೂರು ಕೇಂದ್ರಗಳಿಂದ ರಕ್ಷಿಸಿದ್ದರು. ದ್ವಾರಕ ಆಶ್ರಮ ಜೈಲು ತರಹದ ಆವರಣವನ್ನು ಹೊಂದಿದ್ದು ಅಲ್ಲಿ ಜನರನ್ನು ಖೈದಿಗಳಂತೆ ಬಂಧಿಸಿಡಲಾಗಿತ್ತು ಎಂದು ದೆಹಲಿ ಮಹಿಳಾ ಆಯುಕ್ತೆ ಸ್ವಾತಿ ಮಳಿವಾಳ ತಿಳಿಸಿದ್ದಾರೆ.

ನವ ಮತದಾರರಿಂದ ನವ ಭಾರತ ನಿರ್ಮಾಣ

ನವದೆಹಲಿ, ಡಿ. 31: ನವಭಾರತ ನಿರ್ಮಾಣಕ್ಕೆ ಕೈ ಜೋಡಿಸಿರುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. 39ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಹೊಸವರ್ಷದ ಹಿನ್ನೆಲೆ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಕೈ ಜೋಡಿಸುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಹೇಳಿದ್ದಾರೆ. ಹೊಸ ಮತದಾರರೊಂದಿಗೆ 21ನೇ ಶತಮಾನ ಸೋಮವಾರದಿಂದ ಆರಂಭಗೊಳ್ಳಲಿದೆ. ಹೊಸ ಮತದಾರರನ್ನು ನಾವು ಸ್ವಾಗತಿಸುತ್ತೇವೆ. ಮತದಾರರ ಪಟ್ಟಿಗೆ ನಿಮ್ಮನ್ನು ನೋಂದಣಿ ಮಾಡಿಕೊಳ್ಳುವಂತೆ ಈ ಮೂಲಕ ಮನವಿ ಮಾಡಿಕೊಳ್ಳುದ್ದೇನೆ. ನಿಮಗೆ ಕೇವಲ ಮತ ಹಾಕುವ ಹಕ್ಕು ಅಷ್ಟೇ ಅಲ್ಲ, ನವಭಾರತ ನಿರ್ಮಾಣಕಾರರಾಗಲಿದ್ದೀರಿ. ಹೊಸ ಮತದಾರರನ್ನು ನವಭಾರತದ ಯುವಕರು ಎಂಬು ಎಂದು ನಾನು ಪರಿಗಣಿಸುತ್ತೇನೆ ಎಂದು ತಿಳಿಸಿದ್ದಾರೆ.

ನಟ ರಜನಿಕಾಂತ್ ರಾಜಕಾರಣ ಆರಂಭ

ಚೆನ್ನೈ, ಡಿ. 31: ಸತ್ಯ, ಪ್ರಾಮಾಣಿಕ ಕೆಲಸ ಮತ್ತು ಅಭಿವೃದ್ಧಿಯೇ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಮಂತ್ರವಾಗಿರುತ್ತದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನಲ್ಲಿ ಘೋಷಣೆ ಮಾಡಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಭೇಟಿ ಕಾರ್ಯಕ್ರಮದ ಅಂತಿಮ ದಿನವಾದ ಇಂದು ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿದರು. ಈ ವೇಳೆ ತಮ್ಮ ನೂತನ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿರುವದಾಗಿ ಘೋಷಿಸಿದ ರಜನಿಕಾಂತ್ ತಮ್ಮ ಪಕ್ಷ ಸತ್ಯ, ಪ್ರಾಮಾಣಿಕ ಕೆಲಸ ಮತ್ತು ಅಭಿವೃದ್ಧಿಯೇ ತಮ್ಮ ಪಕ್ಷದ ಮೂಲಮಂತ್ರವಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಜನಿಕಾಂತ್, ಕಳೆದ ಒಂದು ವರ್ಷದಿಂದ ತಮಿಳುನಾಡು ಜನತೆ ಅತ್ಯಂತ ಕೆಟ್ಟ ರಾಜಕೀಯವನ್ನು ನೋಡಿದ್ದಾರೆ. ಕಳೆದೊಂದು ವರ್ಷಗಳ ಬೆಳವಣಿಗೆಯಿಂದ ಜನ ರೋಸಿಹೋಗಿದ್ದಾರೆ. ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರವನ್ನು ತಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಕಾರು ಪಲ್ಟಿ : ಇಬ್ಬರು ಸ್ಥಳದಲ್ಲೇ ಸಾವು

ಹಾಸನ, ಡಿ. 31: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಸಿಂಗೇನಹಳ್ಳಿ ಬಳಿ ನಡೆದಿದೆ. ಸುರೇಶ್ (37) ಮತ್ತು ಪ್ರದೀಪ್ (38) ಮೃತ ದುರ್ದೈವಿಗಳು. ಮೃತರನ್ನು ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಚನ್ನರಾಯಪಟ್ಟಣ ಅರಸೀಕೆರೆ ನಡುವಿನ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು, ಘಟನೆಯಿಂದ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಸುರೇಶ್ ಮತ್ತು ಪ್ರದೀಪ್ ಸೇರಿದಂತೆ ಗಾಯಾಳುಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ತಮ್ಮ ಗ್ರಾಮಕ್ಕೆ ಒಟ್ಟಿಗೆ ಕಾರಿನಲ್ಲಿ ಇಂದು ಮುಂಜಾನೆ ಹೊರಟಿದ್ದರು. ಈ ಸಂದರ್ಭ ಕಾರು ವೇಗವಾಗಿ ಓಡಿಸುತ್ತಿದ್ದು, ರಸ್ತೆಯಲ್ಲಿ ಗುಂಡಿಯೊಂದರ ಮೇಲೆ ಓಡಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿಯೇ ಕಾರು ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಸುರೇಶ್ ಮತ್ತು ಪ್ರದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.