ಮಡಿಕೇರಿ, ಡಿ. 30: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ ಗೊಂಡಿರುವ ಸ್ಪೋಟ್ರ್ಸ್ ವಲ್ರ್ಡ್ ಜಿಲ್ಲಾಮಟ್ಟದ ಲೆದರ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಂತಕ್ಕೆ ಮಡಿಕೇರಿಯ ಎಂ.ವೈ.ಸಿ.ಸಿ. ತಂಡ ಹಾಗೂ ಎಂ.ವೈ.ಸಿ.ಸಿ.(ಎ) ತಂಡಗಳು ಪ್ರವೇಶಿಸಿವೆ.

17 ಕ್ಲಬ್ ತಂಡಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿಯ ಸೆಮಿ ಫೈನಲ್ ಇಂದು ನಡೆಯಿತು. ಪ್ರಥಮ ಸೆಮಿಫೈನಲ್‍ನಲ್ಲ್ಲಿ ಎಂ.ವೈ.ಸಿ.ಸಿ. ತಂಡ ಐ.ಸಿ.ಸಿ. ಮಾದಾಪುರ ತಂಡವನ್ನು 7 ವಿಕೆಟ್‍ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಐ.ಸಿ.ಸಿ. ಮಾದಾಪುರ 20 ಓವರ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 104 ರನ್‍ಗಳಿಸಿದರೆ, ಎಂ.ವೈ.ಸಿ.ಸಿ. ತಂಡದರು 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 27 ರನ್ ಹಾಗೂ 3 ವಿಕೆಟ್ ಪಡೆದ ರಾಜು ಎಲ್.ಎಫ್. ಪಂದ್ಯ ಪುರುಷೋತ್ತಮರಾದರು.

ಎರಡನೇ ಸೆಮಿಫೈನಲ್‍ನಲ್ಲಿ ಎಂ.ವೈ.ಸಿ.ಸಿ. (ಎ) ತಂಡ ಮಡಿಕೇರಿಯ ವೆಸ್ಟರ್ನ್ ಸ್ಪೋಟ್ರ್ಸ್ ಕ್ಲಬ್ ತಂಡವನ್ನು 6 ವಿಕೆಟ್‍ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ವೆಸ್ಟರ್ನ್ ತಂಡ 7 ವಿಕೆಟ್ ನಷ್ಟಕ್ಕೆ 130 ರನ್‍ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಎಂ.ವೈ.ಸಿ.ಸಿ. (ಎ) ತಂಡ 4 ವಿಕೆಟ್ ನಷ್ಟಕ್ಕೆ ಜಯ ಗಳಿಸಿತು. ಅಜೇಯ 62 ರನ್ ಗಳಿಸಿದ ಅನ್ಸಫ್ ಪಂದ್ಯ ಪುರುಷರಾದರು. ತಾ. 31ರಂದು (ಇಂದು) ಫೈನಲ್ ನಡೆಯಲಿದೆ.