ಚೆಟ್ಟಳ್ಳಿ, ಡಿ. 30: ಚೆಟ್ಟಳ್ಳಿಯ ಶ್ರೀಮಂಗಲ ಗ್ರಾಮದ ಪುತ್ತರಿ ಊರೊರ್ಮೆ ಬಾಣೆಯಲ್ಲಿ ಪುತ್ತರಿ ಊರೊರ್ಮೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಬಟ್ಟಿರ ಪೂಣಚ್ಚ (ಪೂಕುಂಞÂ) ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಊರಿನಲ್ಲಿ ಮೃತಪಟ್ಟ ಪುತ್ತರಿರ ಕೆ. ಸೋಮಣ್ಣ ಹಾಗೂ ಪುತ್ತರಿರ ಸುಬ್ಬವ್ವ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕಳೆದ ಪುತ್ತರಿ ಊರೊರ್ಮೆಯ ವರದಿಯನ್ನು ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ಪುತ್ತರಿರ ಪಪ್ಪು ತಿಮ್ಮಯ್ಯ ಓದಿದರು. ಚೆಟ್ಟಳ್ಳಿಯ ಕಾಂಗ್ರೆಸ್ ಪಕ್ಷದ ವಲಯ ಅಧ್ಯಕ್ಷರಾಗಿದ್ದ ಪುತ್ತರಿರ ಪಪ್ಪು ತಿಮ್ಮಯ್ಯ ಜಿಲ್ಲಾಕಾಂಗ್ರೆಸ್ ವಕ್ತಾರರಾಗಿ ಆಯ್ಕೆಯಾಗಿರುವದಕ್ಕೆ ಅಭಿನಂದಿಸಿದರು. ಕೊಡವರ ಸಂಸ್ಕø್ರತಿಯ ಆಚರಣೆಯಾದ ಪುತ್ತರಿ ನಮ್ಮೆ, ಮನೆಪಾಟ್, ಊರೊರ್ಮೆ, ಕೋಲ್ ಮಂದ್ ಆಚರಣೆ ಮರೆಯಾಗುತಿದ್ದು ಇದನ್ನು ಉಳಿಸಿ-ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸುವದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಫಂಡಿನ ಸದಸ್ಯ ಪುತ್ತರಿರ ಕರುಣ್ ಕಾಳಯ್ಯ ವಂದಿಸಿದರು.
ಊರಿನ ಹಿರಿಯರು ದೇವರಿಗೆ ಮೀದಿ ಇಟ್ಟು ಊರನ್ನು ಕಾಪಾಡೆಂದು ಬೇಡಿಕೊಂಡರು. ಊರಿನ ಪರವಾಗಿ ಬಟ್ಟಿರ ವೇಣು ನಾಚಪ್ಪ ಮಾತನಾಡಿ, ಸಂಪ್ರದಾಯವನ್ನು ಉಳಿಸಿ-ಬೆಳೆಸಲು ಒಗ್ಗಟ್ಟಾಗಿ ಶ್ರಮಿಸಬೇಕೆಂದರು. ಕಾರ್ಯಕ್ರಮದಲ್ಲಿ ಪುತ್ತರಿರ, ಮುಳ್ಳಂಡ, ಬಟ್ಟಿರ ಹಾಗೂ ಬೊಪ್ಪಟ್ಟಿರ ಕುಟುಂಬಸ್ಥರು ಭಾಗವಹಿಸಿದ್ದರು.