ಶ್ರೀಮಂಗಲ, ಡಿ. 30 ಸರ್ಕಾರದ ವತಿಯಿಂದ ಫಲಾನುಭವಿಗಳಿಗೆ ನೀಡಿರುವ ಸೋಲಾರ್ ದೀಪಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾವದೇ ಕಾರಣಕ್ಕೆ ಇದನ್ನು ಮಾರಾಟ ಮಾಡಬಾರದೆಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ 21 ಪಲಾನುಭವಿಗಳಿಗೆ ಸರಕಾರದಿಂದ ಸೋಲಾರ್ ದೀಪಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಅಡಚಣೆ ಹೆಚ್ಚಾಗಿದ್ದು, ಅದಲ್ಲದೇ ವಿದ್ಯುತ್ ಇಲ್ಲದ ಮನೆಗಳ ಪಲಾನುಭವಿ ಗಳನ್ನು ಆಯ್ಕೆ ಮಾಡಿ ಸೋಲಾರ್ ದೀಪಗಳನ್ನು ನೀಡ ಲಾಗುತ್ತಿದೆ. ಇದರ ಬಳಕೆ ಹಾಗೂ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಂಡು ಸರಕಾರದ ಈ ಯೋಜನೆಯು ಸದುಪಯೋಗ ಹಾಗೂ ದೀರ್ಘ ಬಾಳಿಕೆ ಬರುವಂತೆ ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನಿರ್ದೇಶಕ ಚಕ್ಕೇರ ವಾಸು ಕುಟ್ಟಪ್ಪ, ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಹುದಿಕೇರಿ ವಲಯ ಕಾಂಗ್ರೇಸ್ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಆಲೀರ ಸಾದಲಿ, ಮಾಜಿ ಜಿ.ಪಂ. ಸದಸ್ಯ ನಾರಾಯಣ, ಬೇಗೂರು ಬೂತ್ ಸಮಿತಿ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಂಗಡ ರಾಜ ಸುಬ್ಬಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಎಸ್. ವಸಂತ್, ಪ್ರಮುಖರಾದ ಸಮ್ಮದ್, ಮಾಂಗೇರ ಪೊನ್ನಪ್ಪ, ಗ್ರಾ.ಪಂ. ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.