ನಾಪೋಕ್ಲು, ಡಿ. 30: ಆಚಾರ, ವಿಚಾರ, ಸಂಸ್ಕøತಿ ಉಳಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಮರಂದೋಡ ಯವಕಪಾಡಿ ಗೌಡ ಸಮಾಜದ ವಾರ್ಷಿಕೋತ್ಸವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದ್ದು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟು, ಸಹಬಾಳ್ವೆಯಿಂದ ದೇಶದ ಅಭಿವೃದ್ಧಿಗೆ ಸಹಕರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಗೌಡ ಸಮಾಜ ಮತ್ತು ಬೈತ್ರಿ ಕ್ಲಬ್ ಕಾರ್ಯೋನ್ಮುಖವಾಗಿರುವದು ಶ್ಲಾಘನೀಯ ಎಂದರು.
ಗೌಡ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂಡೀರ ಜಗದೀಶ್ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಎಲ್ಲರೂ ಮುಂದೆ ಬರುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಯುವ ಮೋರ್ಚಾ ಅಧಕ್ಷ ಕಾಳನ ರವಿ, ಕಡ್ಲೇರ ಕೀರ್ತನ್, ಸ್ಥಳ ದಾನಿ ಬಾರಿಕೇರ ಜಾನಕಿ, ನಿವೃತ್ತ ಕೃಷಿ ಅಧಿಕಾರಿ ಶಂಭು ಪೊನ್ನಪ್ಪ, ಮಾಜಿ ಸೈನಿಕ ಚಂಡೀರ ದೇವಯ್ಯ, ಗೌಡ ಸಮಾಜದ ಮಾಜಿ ಅಧ್ಯಕ್ಷ ಮುಕ್ಕಾಟಿರ ಚಂಗಪ್ಪ, ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ರಮೇಶ್, ಮೈತ್ರಿ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಚಿಟ್ಟಿಯಪ್ಪ, ಬಾರಿಕೇರ ಜನಾರ್ಧನ್, ಅಣ್ಣಮಂಡ ನಂದಾ ಮತ್ತು ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಸಮಾಜದ ಅಧ್ಯಕ್ಷ ಚಂಡೀರ ಮುದ್ದಪ್ಪ ವಹಿಸಿದ್ದು, ಈ ಸಂದರ್ಭ ಹಿರಿಯರಾದ ಮುಕ್ಕಾಟಿರ ನಾಣಯ್ಯ ಅವರನ್ನು ಶಾಸಕ ಕೆ.ಜಿ. ಬೋಪಯ್ಯ ಸನ್ಮಾನಿಸಿದರು. ಬಾರಿಕೇರ ಜಯಂತಿ, ಆಶಿಕಾ, ರಕ್ಷಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಚಂಡೀರ ರ್ಯಾಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.