ಕುಶಾಲನಗರ, ಡಿ. 30: ಮರ್ಕಝ್ ರೂಬಿ ಜುಬಿಲಿ ಮಹಾ ಸಮ್ಮೇಳನದ ಪ್ರಚಾರಾರ್ಥ ಹಮ್ಮಿಕೊಂಡಿರುವ ಶೈಕ್ಷಣಿಕ ಜಾಗೃತಿ ಜಾಥಾ ಕುಶಾಲನಗರಕ್ಕೆ ಆಗಮಿಸಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಜನಾಬ್ ಡಾ. ಅಬ್ದುಲ್ ಹಕೀಂ ಹಝಿರಿ ಮತ್ತು ಜನಾಬ್ ಅಬ್ದುಲ್ ರಜೀದ್ ಜೆನಿ ಅವರು ಶಿಕ್ಷಣದ ಮಹತ್ವ ಹಾಗೂ ಜಾಗೃತಿ ಯಾತ್ರೆಯ ಕುರಿತು ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಎಂ. ಲತೀಫ್, ಜನಾಬ್ ಅಬು ಸುಫಿಯಾನ್ ಮದನಿ ಇದ್ದರು.