ಮಡಿಕೇರಿ, ಡಿ. 30: ಮಕ್ಕಳು ದೇಶದ ಸಂಪತ್ತು. ಆ ಸಂಪತ್ತು ಬೆಳೆಯಬೇಕಾದರೆ ಮಕ್ಕಳ ಆರೋಗ್ಯದ ಕಡೆ ವಿಶೇಷ ಕಾಳಜಿ ವಹಿಸುವದು ಅಗತ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಸಬಲ ಯೋಜನೆಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಹಾಯಕ ಶಿಶು ಸಂಯೋಜನಾಧಿಕಾರಿ ಸವಿತಾ ಹಾಗೂ ಆರ್.ಸಿ.ಹೆಚ್. ಅಧಿಕಾರಿ ಡಾ. ನಿಲೇಶ್ ಮಾತನಾಡಿದರು. ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಮುಮ್ತಾಜ್, ಜನಸೇವಾ ಟ್ರಸ್ಟ್ನ ಸುಷ್ಮಾ ಇತರರು ಇದ್ದರು.