ಕುಶಾಲನಗರ, ಡಿ. 30: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಶನಿವಾರ 24ಮನೆ ತೆಲುಗುಶೆಟ್ಟರ ಕ್ಷೇಮಾಭಿವೃದ್ಧಿ ಸಮಾಜದ ಪದಾಧಿಕಾರಿಗಳು ಧರಣಿ ನಡೆಸಿದರು.

ಪಟ್ಟಣದ ಕಾರು ನಿಲ್ದಾಣ ಆವರಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿ ಸಂದರ್ಭ ಸಮಾಜದ ಪದಾಧಿಕಾರಿಗಳು, ಸದಸ್ಯರು ನೂತನ ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿದರು.

ಧರಣಿಯಲ್ಲಿ ಸಮಾಜದ ಅಧ್ಯಕ್ಷರಾದ ಹೆಚ್.ಆರ್.ಮಂಜುನಾಥ್, ಗೌರವ ಅಧ್ಯಕ್ಷ ಕಾಶಿ, ಕಾರ್ಯದರ್ಶಿ ಹೆಚ್.ವಿ.ಪ್ರಕಾಶ್, ಖಜಾಂಚಿ ಶಿವಲಿಂಗ ಶೆಟ್ಟಿ, ಸಂಚಾಲಕ ಶಾಂತರಾಜು ಮತ್ತಿತರರು ಇದ್ದರು.