ವರದಿ :ವಾಸು ಎ.ಎನ್

ಸಿದ್ದಾಪುರ, ಡಿ. 30: ಕಾಡಾನೆಗಳ ಹಿಂಡು ಅರಣ್ಯಾಧಿಕಾರಿಗಳನ್ನು ಹಾಗೂ ಮಾಧ್ಯಮದ ಪ್ರತಿನಿಧಿಗಳನ್ನು ಅಟ್ಟಾಡಿಸಿ ಕೂದಲೆಳೆ ಅಂತರದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ.

ಘಟ್ಟದಳ್ಳದ ಹೆರೂರು ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿರುವ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆಗೆ ವರದಿ :ವಾಸು ಎ.ಎನ್

ಸಿದ್ದಾಪುರ, ಡಿ. 30: ಕಾಡಾನೆಗಳ ಹಿಂಡು ಅರಣ್ಯಾಧಿಕಾರಿಗಳನ್ನು ಹಾಗೂ ಮಾಧ್ಯಮದ ಪ್ರತಿನಿಧಿಗಳನ್ನು ಅಟ್ಟಾಡಿಸಿ ಕೂದಲೆಳೆ ಅಂತರದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ.

ಘಟ್ಟದಳ್ಳದ ಹೆರೂರು ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿರುವ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆಗೆ ನಡೆಸುತ್ತಿದ್ದ ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಆಕ್ರೋಶಗೊಂಡು ಅಟ್ಟಾಡಿಸಿ ಬಂದವು. ಕಾಡಾನೆಯು ಘೀಳಿಟ್ಟು ಓಡಿ ಬರುತ್ತಿದ್ದ ದೃಶ್ಯವನ್ನು ಕಂಡು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಓಡಿದ್ದಾರೆ. ಇದೇ ಸಂದರ್ಭ ಸುದ್ಧಿಗೆ ತೆರಳಿದ್ದ ಬಿ.ಟಿ.ವಿ ವರದಿಗಾರ ಗೋಪಾಲ್ ಸೋಮಯ್ಯ ಹಾಗೂ ಕ್ಯಾಮೆರಾಮ್ಯಾನ್ ಸುರ್ಜಿತ್ ಕೂಡ ಕೂದಲೆಳೆ ಅಂತರದಿಂದ ಪಾರಾದರು. ಬಳಿಕ ಅರಣ್ಯ ಇಲಾಖಾಧಿಕಾರಿಗಳು ಪಟಾಕಿ ಸಿಡಿಸಿ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಸಫಲರಾದರು.

ಈಗಾಗಲೇ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು, ಕಾಡಾನೆ ಹಾವಳಿಯಿಂದ ಕಾರ್ಮಿಕರು ಹಾಗೂ ಬೆಳೆಗಾರರು ಕಂಗಾಲಾಗಿದ್ದಾರೆ. ಹಾಡುಹಗಲ್ಲೇ ಕಾಡಾನೆಗಳು ಪ್ರತ್ಯಕ್ಷಗೊಳ್ಳುತ್ತಿದ್ದು, ಪ್ರಾಣಭೀತಿಯಿಂದಲೇ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಕಾಡಾನೆ ಧಾಳಿಯಾದರೇ ಮತ್ತೊಂದೆಡೆ ವ್ಯಾಘ್ರನ ಅಟ್ಟಹಾಸ ಕೂಡ ಮುಂದುವರೆದಿದೆ. ನಿರಂತರ ವಾಗಿ ಜಾನುವಾರುಗಳ ಮೇಲೆ ದಾಳಿನಡೆಸುತ್ತಿರುವದು ಕೂಡ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದೆ. ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟ ಬೇಕೆಂದು ಗ್ರಾಮಸ್ಥರಾದ ಅಜ್ಜಿನಿಕಂಡ ರಾಜು ಅಪ್ಪಯ್ಯ ಒತ್ತಾಯಿಸಿದ್ದಾರೆ.