ನಾಪೆÇೀಕ್ಲು, ಡಿ. 29: ಸಂಘದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮರಂದೋಡ ಕೊಡವ ಸಂಘದ ಅಧ್ಯಕ್ಷ ಅನ್ನಾಡಿಯಂಡ ದಿಲೀಪ್ ಕುಮಾರ್ ಹೇಳಿದರು.ಮರಂದೋಡ ಗ್ರಾಮದ ದವಸ ಭಂಡಾರದಲ್ಲಿ ಏರ್ಪಡಿಸಲಾಗಿದ್ದ 6ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಸದಸ್ಯರು ಸದಸ್ಯತ್ವದ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. 18 ವರ್ಷ ಪ್ರಾಯ ತುಂಬಿದ ಯುವಕ ಮತ್ತು ಯುವತಿಯರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತೀ ಕುಟುಂಬದಲ್ಲಿಯೂ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಆಗ ಮಾತ್ರ ಗ್ರಾಮ, ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು. ಮದುವೆ ದುಂದುವೆಚ್ಚ ತಗ್ಗಿಸುವ ಮೂಲಕ ಕುಂಟುಂಬದಲ್ಲಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬೇಕು. ಉಡುಗೆ, ತೊಡುಗೆ, ಆಚಾರ-ವಿಚಾರ, ಪದ್ಧತಿ-ಪರಂಪರೆಯ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ, ನಿರ್ದೇಶಕರಾದ ಮಾರ್ಚಂಡ ಅಯ್ಯಪ್ಪ, ಪ್ರವೀಣ್, ಪೆಮ್ಮಂಡ ಅರುಣ್, ನೆಡುಮಂಡ ಹರೀಶ್, ಮರಂದೋಡ ದವಸ ಭಂಡಾರದ ಅಧ್ಯಕ್ಷ ಮಾರ್ಚಂಡ ತಿಮ್ಮಯ್ಯ ಮತ್ತಿತರರು ಇದ್ದರು.