ಸೋಮವಾರಪೇಟೆ, ಡಿ. 29: ಸಮೀಪದ ದೊಡ್ಡಮಳ್ತೆ ಗ್ರಾಮಸ್ಥರು ಶ್ರಮದಾನದ ಮೂಲಕ ದೊಡ್ಡಮಳ್ತೆ ಸರ್ಕಾರಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.
ಶಾಲೆಯ ಆವರಣ ಹಾಗೂ ರಸ್ತೆಯ ಬದಿಯಲ್ಲಿ ಬೆಳೆದಿರುವ ಕಾಡು, ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಶಾಲಾ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹಿನ್ನೆಲೆ ಶ್ರಮದಾನದ ಮೂಲಕ ಆವರಣ ಸ್ವಚ್ಛಗೊಳಿಸಲಾಗಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಸತೀಶ್ ಹೇಳಿದರು.
ಶ್ರಮದಾನದಲ್ಲಿ ಬಿ.ಎಸ್. ನಾರಾಯಣ, ಡಿ.ಬಿ. ಲೋಕೇಶ್, ಡಿ.ಪಿ. ದಿಲೀಪ್ ಕುಮಾರ್, ಡಿ.ವಿ. ರುದ್ರಪ್ಪ, ಮಹೇಶ್, ರವಿ ಮತ್ತಿತರರು ಭಾಗವಹಿಸಿದ್ದರು.