ಸೋಮವಾರಪೇಟೆ, ಡಿ. 29: ಶಾಂತಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಸಮಿತಿ, ಕುಮಾರಲಿಂಗೇಶ್ವರ ಯುವಕ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ಶಾಲೆಯ ಕಟ್ಟಡದ ಮೇಲೆ, ಶಾಲಾವರಣ ಹಾಗೂ ಮೈದಾನದಲ್ಲಿ ಬೆಳೆದಿದ್ದ ಕುರುಚಲು ಗಿಡ ಗಂಟಿಗಳನ್ನು ಕಡಿದು ಸ್ವಚ್ಛತೆಗೊಳಿಸಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುತ್ತಣ್ಣ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನೇತ್ರಾವತಿ, ನಿವೃತ್ತ ಸೈನಿಕ ಸುಬ್ಬಯ್ಯ, ಗ್ರಾಮದ ಪ್ರಮುಖರುಗಳಾದ ಉತ್ತಯ್ಯ, ಕಾರ್ಯಪ್ಪ, ಧನ್ಯಕುಮಾರ್, ರುದ್ರಪ್ಪ, ಲೋಲಾಕ್ಷಿ, ಸಣ್ಣಕ್ಕ, ಪರಮೇಶ್ವರಸ್ವಾಮಿ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.