ಮಡಿಕೇರಿ, ಡಿ. 29: ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸ್‍ನೆಸ್ ಮೆನ್ ಅಸೋಸಿಯೇಷನ್‍ನ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಸ್ಥೆಯ ಅಧ್ಯಕ್ಷ ತೋಲಂಡ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಸೋಸಿಯೇಷನ್‍ನ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಭೂ ಪರಿವರ್ತನೆ ಯಲ್ಲಿ ಆಗುತ್ತಿರುವ ವಿಳಂಬ, ಕನಿಷ್ಟ 10 ಸೆಂಟ್ ಜಾಗಕ್ಕೆ ಭೂಪರಿವರ್ತನೆಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಪ್ರಾಧಿಕಾರದ ಇಲಾಖೆಯಿಂದ ನಿರಾಕ್ಷೇಪಣಾ (ಎನ್.ಒ.ಸಿ)ಪತ್ರ ನೀಡದೆ ಇರುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಸರ್ವೆ ಇಲಾಖೆಯಲ್ಲಿ ಮಾರಾಟದ ಉದ್ದೇಶಕ್ಕಾಗಿ 11ಇ ನಕ್ಷೆ (5 ಸೆಂಟಿನಿಂದ 20 ಸೆಂಟ್‍ವರೆಗೆ) ನೀಡುತ್ತಿಲ್ಲ. ಕಂದಾಯ ಇಲಾಖೆ ಯಲ್ಲಿ, ಭೂಮಿ ಕೇಂದ್ರದಲ್ಲಿ ಕಂಪ್ಯೂಟರ್ ತಾಂತ್ರಿಕ ದೋಷ ದಿಂದಾಗಿ ಸಾರ್ವಜನಿಕರ ಕೆಲಸ, ಕಾರ್ಯಗಳು ವಿಳಂಬವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತವಾಯಿತು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಸಂಘವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರಮುಖ ಕೇಂದ್ರಗಳಿಗೆ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ಸದಸ್ಯತ್ವವನ್ನು ಹೆಚ್ಚು ಮಾಡಲು ಸಭೆ ನಿರ್ಧರಿಸಿತು.

ಈ ಸಂದರ್ಭ ಅಸೋಸಿ ಯೇಷನ್ ಉಪಾಧ್ಯಕ್ಷ ಮುಬಿನ್ ಅಹಮ್ಮದ್, ಗೌರವಾಧ್ಯಕ್ಷ ಕೋಡಿ ಚಂದ್ರಶೇಖರ್, ಖಜಾಂಚಿ ಟ್ರಾವೆಲ್ ಜಾನ್‍ಸನ್ ಪಿಂಟೊ, ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸದಾಶಿವ ರೈ, ಸಂಚಾಲಕ ಎನ್.ಡಿ. ಕುಶಾಲಪ್ಪ, ನಿರ್ದೇಶಕರುಗಳಾದ ವಿ. ಅಬ್ದುಲ್ ಕರೀಂ, ಜೆ.ಎನ್. ಪದ್ಮನಾಭ, ಕೇಚನ ಬೆಳ್ಯಪ್ಪ, ಎಂ.ಎಂ. ಹಾರೂನ್, ಸದಸ್ಯರುಗಳಾದ ಯು. ಇಮ್ರಾನ್, ಎ.ಎ. ಪಳಂಗಪ್ಪ, ಎನ್.ಎ. ಇಬ್ರಾಹಿಂ,

ಕೆ.ಟಿ. ಬಷೀರ್, ಎ.ಟಿ. ಪೊನ್ನಪ್ಪ, ಎ.ಪಿ. ಚೇತನ್, ಪಚ್ಚಾರಂಡ ಸುರೇಶ್, ಡಿ.ಎಂ.ಕಿರಣ್, ಕೆ.ಬಿ. ಉತ್ತಪ್ಪ, ಪುಷ್ಪ ಪೂಣಚ್ಚ, ಸಿ.ಎನ್. ಮಂದಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಘದಲ್ಲಿ ನೂತನವಾಗಿ ಸದಸ್ಯತ್ವ ಹೊಂದುವವರು ಡಿಸೆಂಬರ್ ಅಂತ್ಯ ದೊಳಗೆ ಹೆಸರು ನೋಂದಾಯಿಸಿ ಕೊಳ್ಳಬಹುದೆಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣಪ್ಪ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಘದ ಖಜಾಂಚಿ ಟ್ರಾವಲ್ ಜಾನ್ಸ್‍ನ್ ಪಿಂಟೊ : 9449767492 ನ್ನು ಸಂಪರ್ಕಿಸಬಹುದಾಗಿದೆ.

ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸಿನೆಸ್‍ಮೆನ್ ಅಸೋಸಿಯೇಷನ್ ವತಿಯಿಂದ ನೂತನ ಜಿಲ್ಲಾಧಿಕಾರಿಗಳಾದ ಶ್ರೀವಿದ್ಯಾ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೌರವಿಸಲಾಯಿತು. ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣಪ್ಪ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.