ವೀರಾಜಪೇಟೆ, ಡಿ. 29: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಮಾರ್ಕೇಟಿಂಗ್ ಫೆಡರೇಶನ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಚೇಟೀರ ಚೋಟು ಕಾವೇರಪ್ಪ ಹಾಗೂ ಉಪಾಧ್ಯಕ್ಷ ರಾಗಿ ಪಟ್ಟಡ ಮನು ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆಡರೇಶನ್ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಚುನಾವಣೆ ಸಂದರ್ಭ ನಿರ್ದೇಶಕರುಗಳಾದ ಸೋಮೆಯಂಡ ಕಾವೇರಿ ಮಂದಣ್ಣ, ಮಲ್ಲಂಡ ಮಧು ದೇವಯ್ಯ, ಕೊಂಗಾಂಡ ಜಯ ಕಾಳಯ್ಯ, ಮಚ್ಚಮಾಡ ಕಂದ ಭೀಮಯ್ಯ, ಪುಟ್ಟಿಚಂಡ ವೀಣಾ ಮಹೇಶ್, ಕರ್ತಚಿರ ಲತಾ ಭೀಮಯ್ಯ, ವಾಟೇರಿರ ಶಂಕರಿ ಪೂವಯ್ಯ, ಕುಪ್ಪಂಡ ಮನು ಪೂವಯ್ಯ, ಕಾಯಪಂಡ ಟಾಟು ಚಂಗಪ್ಪ, ಮಾದಪಂಡ ಕಾಶಿ ಕಾವೇರಪ್ಪ, ಪುಲಿಯಂಡ ಅಪ್ಪಯ್ಯ, ಚೆನಿಯಾ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಐನಂಡ ಜಪ್ಪು ಅಚ್ಚಪ್ಪ ಅಧ್ಯಕ್ಷ ಸ್ಥಾನ ಹಾಗೂ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆಡಳಿತ ಮಂಡಳಿಯ ಸಂಖ್ಯೆ ಈಗ 14ಕ್ಕೆ ಇಳಿದಿದೆ.