ಮಡಿಕೇರಿ, ಡಿ. 29: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷರನ್ನಾಗಿ ಜಿ.ಪಂ. ಸದಸ್ಯೆ, ಸರಿತಾ ಪೂಣಚ್ಚ ಅವರನ್ನು ನೇಮಕ ಮಾಡಲಾಗಿದೆ. ಕೆ.ಪಿ.ಸಿ.ಸಿ.ಯ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ 30 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕೊಡಗು ಜಿಲ್ಲೆಗೆ ಸರಿತಾ ಅವರನ್ನು ಆಯ್ಕೆ ಮಾಡಲಾಗಿದೆ. ಸರಿತಾ ಪೂಣಚ್ಚ ಅವರು ಕೆ.ಪಿ.ಸಿ.ಸಿ.ಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿಯೂ ಮೂರು ತಿಂಗಳ ಹಿಂದೆ ನೇಮಕಗೊಂಡಿದ್ದರು. ಇದೀಗ ಕೆ.ಪಿ.ಸಿ.ಸಿ.ಗೆ ಮತ್ತೆ ಹೊಸ ನೇಮಕಾತಿಯಾಗಿದ್ದು, ಮತ್ತೋರ್ವ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಆದೇಂಗಡ ತಾರಾ ಅಯ್ಯಮ್ಮ ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ. ಚಂದ್ರಕಲಾ ಅವರು ಆಯ್ಕೆಗೊಂಡಿದ್ದಾರೆ. ಎ.ಐ.ಸಿ.ಸಿ.ಯ ಶಿಫಾರಸಿನಂತೆ ಕೆ.ಪಿ.ಸಿ.ಸಿ.ಗೆ ಇವರನ್ನು ನೇಮಕ ಮಾಡಲಾಗಿದೆ.