ಪೊಲೀಸ್ ಕ್ರೀಡೆ ಮಡಿಕೇರಿ, ಡಿ. 29: ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ನಡೆಯುತ್ತಿರುವ ಪೊಲೀಸ್ ಕ್ರೀಡಾಕೂಟ ಎರಡನೇ ದಿನವು ಸಂಭ್ರಮದಿಂದ ನಡೆಯಿತು.

ಇಂದು ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಶೂಟಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ರೋಮಾಂಚಕಾರಿಯಾದ ಕಬಡ್ಡಿ ಪಂದ್ಯಾಟದಲ್ಲಿ ಡಿಎಆರ್ ತಂಡ ಮಡಿಕೇರಿ ಉಪವಿಭಾಗ ತಂಡವನ್ನು ಪರಾಭವಗೊಳಿಸಿ ಕಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕ್ರೀಡಾಕೂಟದ ಸಮಾರೋಪ ಸಮಾರಂಭ ತಾ. 30ರಂದು (ಇಂದು) ವಿಜೃಂಭಣೆಯಿಂದ ನಡೆಯಲಿದೆ.