ವೀರಾಜಪೇಟೆ, ಡಿ. 29: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಸಂವಿಧಾನದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿರುವ ವೀರಾಜಪೇಟೆ ನಗರ ಕಾಂಗ್ರೆಸ್ ವತಿಯಿಂದ ಇಂದು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಅನಂತ್ ಕುಮಾರ್ ಹೆಗಡೆ ರಾಜೀನಾಮೆಗೆ ಆಗ್ರಹಿಸಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ.ಜಾತಿ ಪಂಗಡದ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ ಮಾತನಾಡಿ ಸಚಿವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ವಕ್ತಾರ ಎಂ.ಎಸ್.ಪೂವಯ್ಯ ಮಾತನಾಡಿ ಸಚಿವ ಅನಂತ್ ಕುಮಾರ್ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿ ಜನವಿರೋಧಿ ಹೇಳಿಕೆ ನೀಡಿರುವದು ಖಂಡನಿಯ ಎಂದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರಸ್ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಎಂ.ಎಂ.ಶಶಿಧರನ್, ಆರ್.ಎಂ.ಸಿ. ಸದಸ್ಯ ಎಂ.ಬೋಪಣ್ಣ, ಜಿಲ್ಲಾ ಸಮಿತಿಯ ಡಿ.ಎಲ್.ಸುಬ್ಬಯ್ಯ, ಅಜೀಜ್ ಅಹ್ಮದ್, ಗಾಯತ್ರಿ ನರಸಿಂಹ, ಪ.ಪಂ.ಸದಸ್ಯೆ ಶೀಬಾ, ನಾಮಕರಣ ಸದಸ್ಯ ಮಹಮದ್ ರಾಫಿ, ಯುವ ಕಾಂಗ್ರೆಸ್‍ನ ಚರೀನ್ ಚಂಗಪ್ಪ, ಮಹಿಳಾ ಘಟಕದ ಪೊನ್ನಕ್ಕಿ, ಪೂವಮ್ಮ, ಗಂಗಮ್ಮ, ಮುಖಂಡ ಪ್ರಥ್ವಿನಾಥ್, ರವಿ, ಹೆಚ್.ಎಂ.ಮಹದೇವ, ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.