ವೀರಾಜಪೇಟೆ, ಡಿ. 28 : ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾಟದಲ್ಲಿ ಕೊಡಗು ರನ್ನರ್ಸ್ ಪ್ರಶಸ್ತಿ ಪಡೆದಿದೆ.

ವೀರಾಜಪೇಟೆಯ ಒಕೀನಾವ ಗೋಜೂ ರ್ಯೂ ಕರಾಟೆ ಶಾಲೆಯ ವಿದ್ಯಾರ್ಥಿಗಳು ಪ್ರಮುಖ ಶಾಲೆಗಳಾದ ಸಂತ ಅನ್ನಮ್ಮ, ನಾಪೋಕ್ಲು ಶ್ರೀರಾಮ ಟ್ರಸ್ಟ್, ಕೆ.ಸಿ.ಎಸ್.ಸಿ. ಕೂರ್ಗ್‍ವ್ಯಾಲಿ, ವಿನಾಯಕ ಇತರ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರಾಟೆ ಶಿಕ್ಷಕ ಸೆನ್‍ಸಾಯಿ ಎಂ.ಬಿ. ಚಂದ್ರನ್ ತರಬೇತು ನೀಡಿದ್ದರು.