ಮಡಿಕೇರಿ, ಡಿ. 28: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡಿನ ಕಾವೇರಿಕೇರಿ ಕೊಡವ ಸಂಘದ ಬೆಳ್ಳಿ ಮಹೋತ್ಸವವು ಇತ್ತೀಚೆಗೆ ಸಂಘದ ಅಧಕ್ಷೆ ಪಳಂಗಂಡ ಕಮಲಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್‍ನಲ್ಲಿ ನಡೆಯಿತು.

ಸಂಘದ ಹಿರಿಯ ಸದಸ್ಯರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸ ಲಾಯಿತು. ಕೇರಿಯ ಸದಸ್ಯೆ ಪಟ್ಟಡ ಪ್ರೇಮಾ ಕರುಂಬಯ್ಯ ಅವರು 25 ವರ್ಷಗಳಿಂದ ಕೇರಿ ನಡೆದು ಬಂದ ಬಗ್ಗೆ ಸಭೆಗೆ ಕಿರು ಪರಿಚಯವನ್ನು ಮಾಡಿಕೊಟ್ಟರು. ಸ್ವಾಗತ ಭಾಷಣ ಮಾಡಿದ ಪಳಂಗಂಡ ಕಮಲಾ ಸುಬ್ಬಯ್ಯ ಅವರು ನಾವು ನಮ್ಮ ಊರಿನಿಂದ ಕೆಲಸ ಅಥವಾ ಇತರೆ ಕಾರ್ಯಗಳ ನಿಮಿತ್ತ ಪಟ್ಟಣದಲ್ಲಿ ಬಂದು ನೆಲೆ ನಿಂತಾದ ಮೇಲೆ ನಮ್ಮ ಸಂಸ್ಕøತಿಯನ್ನು ಉಳಿಸಲು ನಮ್ಮ ಪದ್ಧತಿಗಳ ಆಚರಣೆಗೆ ಒಬ್ಬರಿಗೊಬ್ಬರು ಸಹಾಯ ಮಾಡುವ ದೃಷ್ಟಿಯಿಂದ ಆರಂಭವಾದ ಈ ಕೇರಿಯು ಇಂದು ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿ ರುವದು ಸಂತೋಷ ಎಂದು ನುಡಿದರು.

ಮಡಿಕೇರಿಯಲ್ಲಿ ಕಾವೇರಿ ಕೇರಿಯು ಸ್ಥಾಪನೆಯಾದ ಮೇಲೆ ನಗರದಲ್ಲಿ 12 ಕೊಡವ ಕೇರಿಗಳು ಸ್ಥಾಪನೆಯಾಗಿ ಜನಾಂಗದ ಸಂಸ್ಕøತಿಯ ಬೆಳವಣಿಗೆಗೆ ಶ್ರಮಿಸುತ್ತಿರುವದು ಹೆಮ್ಮೆಯ ವಿಚಾರ ಎಂದರು. ಇಂದು ಜನಾಂಗದ ಲಗ್ನಪತ್ರಿಕೆ, ಮದುವೆ, ನಾಮಕರಣ ಇತ್ಯಾದಿಗಳನ್ನು ಮೂಲ ಪದ್ಧತಿಗೆ ಒತ್ತು ಕೊಡದೆ ಆಡಂಬರದಿಂದಾಗಿ ಪಾರ್ಟಿಗಳಾಗಿ ಬದಲಾಗಿದೆ. ಅದ್ಧೂರಿತನದಿಂದಾಗಿ ಮಕ್ಕಳಿಗೆ ಶುಭ ಸಮಾರಂಭದ ಮೂಲ ಉದ್ದೇಶಗಳು ಪದ್ಧತಿ ಪರಂಪರೆಗಳು ಅರಿವಿಗೆ ಬಾರದೆ ಸಂಸ್ಕøತಿ ನಾಶವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸ್ವಚ್ಛ ಭಾರತ ಅಭಿಯಾನದಲ್ಲಿ ನಮ್ಮ ಮನೆ, ವಠಾರಗಳನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸದಸ್ಯರಾದ ಕಲಿಯಂಡ ಚಂಗಪ್ಪ, ಬಾಳೆಯಡ ಚರ್ಮಣ್ಣ, ಪಳಂಗಂಡ ಸುಬ್ಬಯ್ಯ, ಬಲ್ಯಾಟಂಡ ಪಾರ್ಥ ಚಂಗಪ್ಪ, ಅರಮಣಮಾಡ ದಿ|| ಉತ್ತಯ್ಯ ಅವರ ಪರವಾಗಿ ಶ್ರೀಮತಿ ಪೊನ್ನಮ್ಮ ಜಾಜಿ, ಸ್ಥಾಪಕ ಅಧ್ಯಕ್ಷ ಅಳಮಂಡ ದಿ|| ಚಂಗಪ್ಪನವರ ಪರವಾಗಿ ಅಳಮಂಡ ಬೋಜಮ್ಮ, ಸನ್ಮಾನ ಸ್ವೀಕರಿಸಿದರು. ಸಂಘದಲ್ಲಿ ಕಳೆದ 25 ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದ ಸದಸ್ಯರಾದ ಉಳ್ಳಿಯಡ ನಂದಾ ನಂಜಪ್ಪ, ಬಾಳೆಯಡ ಕಿಶನ್ ಪೂವಯ್ಯ, ಅಪ್ಪನೆರವಂಡ ಚುಮ್ಮಿ ದೇವಯ್ಯ, ಇವರುಗಳಿಗೆ ಸನ್ಮಾನ ಮಾಡಲಾಯಿತು.

ಸಂಘದ ಮಹಿಳಾ ಸದಸ್ಯರಿಂದ ಹಾಗು ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಸಾಂಸ್ಕøತಿಕ ಕಾರ್ಯಕ್ರಮದ ನಂತರ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಉಳ್ಳಿಯಡ ಸಚಿತಾ ನಂಜಪ್ಪ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಾಳೆಯಡ ಸವಿತಾ ಪೂವಯ್ಯ ಹಾಗೂ ಕೂಪದಿರ ಸುನಿತಾ ಮುತ್ತಣ್ಣ ನಡೆಸಿಕೊಟ್ಟರು. ಉಪಾಧ್ಯಕ್ಷ ಕಾರೆರ ಕವನ್ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಾರೆರ ಕವನ್, ಕಾರ್ಯದರ್ಶಿಗಳಾದ ಬಲ್ಯಾಟಂಡ ಲತಾ ಚಂಗಪ್ಪ, ಖಜಾಂಜಿ ಮೇದುರ ಮಿನ್ನು ಕಾವೇರಪ್ಪ, ಸದಸ್ಯರುಗಳಾದ ಕೋಳುಮಾಡಂಡ ಸಾಬು ಉತ್ತಪ್ಪ, ಕೂಪದಿರ ಮುತ್ತಣ್ಣ, ಮುಕ್ಕಾಟಿರ ಕಾರ್ಯಪ್ಪ, ಉಳ್ಳಿಯಡ ನಂದಾ ನಂಜಪ್ಪ, ಬಾಳೆಯಡ ಕಿಶನ್ ಪೂವಯ್ಯ, ಅಪ್ಪನೆರವಂಡ ಚುಮ್ಮಿ ದೇವಯ್ಯ, ಕೋಡಿಮಣಿಯಂಡ ಪದ್ಮಿನಿ ಪೂವಣ್ಣ, ಐಚಂಡ ಸುನಿತಾ ಅಪ್ಪಯ್ಯ, ತೊತ್ಯಂಡ ಸರಸ್ವತಿ, ಮೇದುರ ರೂಪಾ ಹಾಜರಿದ್ದರು.

ಮಧ್ಯಾಹ್ನ ನಡೆದ ವಾರ್ಷಿಕ ಮಹಾಸಭೆಯು ಅಧ್ಯಕ್ಷೆ ಪಳಂಗಂಡ ಕಮಲಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿಗಳಾದ ಬಲ್ಯಾಟಂಡ ಲತಾ ಚಂಗಪ್ಪ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ತೊತ್ಯಂಡ ಸರಸ್ವತಿ ಮತ್ತು ಪಾಡಿಯಂಡ ರಾಧಿಕ ರಶೀನ್ ನಡೆಸಿಕೊಟ್ಟರು. ನಂತರ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೋಡಿಮಣಿಯಂಡ ಪೂವಣ್ಣ, ಉಪಾಧ್ಯಕ್ಷರಾಗಿ ಪಟ್ಟಡ ಪ್ರೇಮಾ ಕರುಂಬಯ್ಯ, ಕಾರ್ಯದರ್ಶಿಯಾಗಿ ಬದ್ದಂಜೆಟ್ಟಿರ ಜಗದೀಶ್, ಖಜಾಂಜಿಯಾಗಿ ಚೇಂದ್ರಿಮಾಡ ಆಗ್ನಿಸ್ ಮುತ್ತಣ್ಣ, ಸದಸ್ಯರಾಗಿ ಉಳ್ಳಿಯಡ ನಂದಾ ನಂಜಪ್ಪ, ಬಾಳೆಯಡ ಕಿಶನ್ ಪೂವಯ್ಯ, ಅಪ್ಪನೆರವಂಡ ಚುಮ್ಮಿ ದೇವಯ್ಯ, ಐಚಂಡ ರಘು ಅಪ್ಪಯ್ಯ, ಚನ್ನಪಂಡ ಮೊಣ್ಣಪ್ಪ, ನಂದೀರ ಅಯ್ಯಪ್ಪ, ಕಾರೆರ ಮುತ್ತಮ್ಮ ಕವನ್, ಪೊನ್ನೋಲತಂಡ ರತಿ ಭೀಮಯ್ಯ, ಮುಕ್ಕಾಟಿರ ಶರ್ಲಿ ಕಾರ್ಯಪ್ಪ, ಮೂವೆರ ಅನು ದೇಚಮ್ಮ ಇವರುಗಳನ್ನು ಆಯ್ಕೆ ಮಾಡಲಾಯಿತು.