ಗೋಣಿಕೊಪ್ಪ ವರದಿ, ಡಿ. 28 : ರಾಷ್ಟ್ರಮಟ್ಟದ ವನವಾಸಿ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಕೊಡಗಿನ ಕ್ರೀಡಾಪಟುಗಳಿಗೆ ವನವಾಸಿ ಕಲ್ಯಾಣದ ವತಿಯಿಂದ ಶುಭಕೋರಿ ಬೀಳ್ಕೊಡಲಾಯಿತು.

ತಿತಿಮತಿ ವನವಾಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಾದ ಪಿ. ಎಸ್. ರಾಘವೇಂದ್ರ, ಮಂಜು, ದಮಯಂತಿ, ಗಣೇಶ, ಕನ್ಯಾಕುಮಾರಿ, ವೈ.ಆರ್. ಗೀತಾ ರಾಷ್ಟ್ರಮಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ವನವಾಸಿ ಕಲ್ಯಾಣ ಅಧ್ಯಕ್ಷ ಸಿದ್ದ, ಕೋಶಾಧಿಕಾರಿ ಮನು ನಂಜಪ್ಪ, ಕಾರ್ಯದರ್ಶಿ ಪಡಿಙÁರಂಡ ಪ್ರಭುಕುಮಾರ್, ಸಹ ಕಾರ್ಯದರ್ಶಿ ಕೃಷ್ಣ, ಕ್ರೀಡಾ ಸಂಚಾಲಕ ಸುಭಾಶ್, ಸದಸ್ಯ ಅನೂಪ್, ವ್ಯವಸ್ಥಾಪಕಿ ಮಂಗಳಾ ಸಿದ್ದಿ ಉಪಸ್ಥಿತರಿದ್ದರು.